ದೇಶದ ಪ್ರಮುಖ ಬ್ಯಾಂಕ್ಗಳಲ್ಲೊಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಚೆಕ್ಗಳಿಗೆ ಸಕಾರಾತ್ಮಕ ವೇತನ ವ್ಯವಸ್ಥೆ ರೂಪಿಸಲು ಸಜ್ಜಾಗಿದೆ. ಹೊಸ ನಿಯಮದ ಪ್ರಕಾರ 50 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಪಾವತಿಗೆ ಪ್ರಮುಖ ವಿವರಗಳನ್ನ ಬ್ಯಾಂಕ್ಗೆ ನೀಡುವ ಅಗತ್ಯ ಬೀಳಬಹುದು. ಈ ಹೊಸ ಚೆಕ್ ಪಾವತಿ ನಿಯಮವು ಜನವರಿ 1ರಿಂದ ಜಾರಿಗೆ ಬರಲಿದೆ.
ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಚೆಕ್ ನೀಡುವವರಿಂದ ಹೆಚ್ಚಿನ ವಿವರಗಳನ್ನ ಪಡೆಯುವ ಮೂಲಕ ವ್ಯವಹಾರ ಸುರಕ್ಷತೆಯನ್ನ ಇನ್ನಷ್ಟು ಹೆಚ್ಚಿಸಲಿದ್ದೇವೆ. ಖಾತೆ ಸಂಖ್ಯೆ, ಚೆಕ್ ಸಂಖ್ಯೆ, ಚೆಕ್ ಮೊತ್ತ , ಚೆಕ್ ಪಾವತಿಗೆ ಸಂಬಂಧಿಸಿದ ವಿವರಗಳನ್ನ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಇನ್ನಷ್ಟು ಮಾಹಿತಿ ಬೇಕಿದ್ದಲ್ಲಿ ನೀವು ಹತ್ತಿರದ ಶಾಖೆಯನ್ನ ಭೇಟಿ ಮಾಡಬಹುದಾಗಿದೆ.
ಕೆಲ ತಿಂಗಳ ಹಿಂದೆಯಷ್ಟೇ ರಿಸರ್ವ್ ಬ್ಯಾಂಕ್ ಪಾಸಿಟಿವ್ ಪೇ ವ್ಯವಸ್ಥೆಯನ್ನ ಪರಿಚಯಿಸಿತ್ತು. ಗ್ರಾಹಕರ ಸುರಕ್ಷೆ ಹಾಗೂ ಮೋಸದ ಜಾಲದಿಂದ ತಪ್ಪಿಸಿಕೊಳ್ಳಲು ಈ ವ್ಯವಸ್ಥೆ ಬ್ಯಾಂಕ್ಗಳಲ್ಲಿ ಜಾರಿಗೆ ಬರಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದರು.
ಪಾಸಿಟಿವ್ ಪೇ ಎಂದರೇನು..?
ಭಾರೀ ಮೊತ್ತದ ಚೆಕ್ಗಳನ್ನ ನೀಡುವ ಗ್ರಾಹಕರ ದಾಖಲೆಯನ್ನ ಮತ್ತೊಮ್ಮೆ ಪರಿಶೀಲನೆ ಮಾಡುವ ವ್ಯವಸ್ಥೆಯೇ ಪಾಸಿಟಿವ್ ಪೇ. ಈ ವ್ಯವಸ್ಥೆಯಡಿಯಲ್ಲಿ ಚೆಕ್ ನೀಡುವವರು ಬ್ಯಾಂಕ್ಗೆ ದಿನಾಂಕ, ಚೆಕ್ ಪಾವತಿದಾರರ ವಿವರ, ಸ್ವೀಕರಿಸುವವರ ವಿವರ, ಮೊತ್ತ ಇತ್ಯಾದಿಗಳ ಬಗ್ಗೆ ಕೆಲ ದಾಖಲೆಗಳನ್ನ ಸಲ್ಲಿಸಬೇಕಾಗುತ್ತೆ.