ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಕೆಲವೇ ದಿನ ಬಾಕಿ ಇರುವಾಗ ನೀವು ಕೊನೆಯ ಕ್ಷಣದವರೆಗೂ ತಡಬಡಾಯಿಸುವ ಅಗತ್ಯವಿಲ್ಲ. ಏಕೆಂದರೆ ಎಸ್.ಬಿ.ಐ. ಸುಲಭವಾಗಿ ಐಟಿ ರಿಟರ್ನ್ ಫೈಲ್ ಮಾಡುವ ದಾರಿ ಹುಡುಕಿಕೊಟ್ಟಿದೆ.
ಎಸ್ಬಿಐ ಯೋನೊ ಅಪ್ಲಿಕೇಶನ್ ಬಳಸಿ ನಿಮ್ಮ ತೆರಿಗೆ ರಿಟರ್ನ್ ಅನ್ನು ಉಚಿತವಾಗಿ ಫೈಲ್ ಮಾಡಬಹುದಾಗಿದೆ. ಹೇಗೆ ಪ್ರಕ್ರಿಯೆ ನಡೆಸಬೇಕೆಂಬ ವಿಚಾರವನ್ನು ಎಸ್ಬಿಐ ತನ್ನ ವೆಬ್ ಮೂಲಕ ಹಾಗೂ ಟ್ವೀಟರ್ ಖಾತೆಯಲ್ಲಿ ತಿಳಿಸಿದೆ.
ಆದಾಯ ತೆರಿಗೆ ಅಧಿಕೃತ ವೆಬ್ಸೈಟ್ https://www.incometaxindiaefiling.gov.in ಸೇರಿದಂತೆ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹಲವು ಆನ್ಲೈನ್ ಆಯ್ಕೆಗಳು ಲಭ್ಯವಿದ್ದರೂ, ಎಸ್ಬಿಐನ ಯೋನೊ ಅಪ್ಲಿಕೇಶನ್ ತುಂಬಾ ಉಪಯುಕ್ತವಾಗಿದೆ.