alex Certify ಹೊಸ ವರ್ಷಕ್ಕೆ ಟಫ್ ರೂಲ್ಸ್ ಜಾರಿ: ಉಲ್ಲಂಘನೆ ಕಂಡು ಬಂದ್ರೆ ಕಾನೂನು ಕ್ರಮ ಗ್ಯಾರಂಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಟಫ್ ರೂಲ್ಸ್ ಜಾರಿ: ಉಲ್ಲಂಘನೆ ಕಂಡು ಬಂದ್ರೆ ಕಾನೂನು ಕ್ರಮ ಗ್ಯಾರಂಟಿ..!

ಕೊರೊನಾ ಮಹಾಮಾರಿಯ ನಡುವೆ ಬ್ರಿಟನ್ ರೂಪಾಂತರ ಕೊರೊನಾ ಭೀತಿ ಕೂಡ ಇದೆ. ಹೀಗಾಗಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಅಲ್ಲದೆ ಕದ್ದು ಮುಚ್ಚಿ ಹೆಚ್ಚಿನ ಜನ ಸೇರಿಕೊಂಡು ಪಾರ್ಟಿ ಮಾಡೋವ್ರ ಮೇಲೂ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಈ ಸಂಬಂಧ ಪಾರ್ಟಿ ಮಾಡುವವರಿಗೆ ಖಡಕ್ ಸೂಚನೆ ನೀಡಿದ್ದಾರೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್.

ಹೌದು, ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಪಾರ್ಟಿಗೆ‌ ನಿರ್ಬಂಧಗಳನ್ನು ಹೇರಲಾಗಿದ್ದು, ರಸ್ತೆ, ಹೊರ ಜಾಗಗಳಲ್ಲಿ ಪಾರ್ಟಿ ಆಯೋಜಿಸುವಂತಿಲ್ಲ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪಾರ್ಟಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. 31ರ ರಾತ್ರಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಖಾಸಗಿ ಜಾಗಗಳಲ್ಲಿ ಪಾರ್ಟಿ ಮಾಡಿಕೊಳ್ಳಬಹುದು‌‌.

ಪಬ್, ಬಾರ್, ಕ್ಲಬ್ ಗಳಲ್ಲಿ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಾರ್ಗ ಸೂಚಿ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘನೆ ಕಂಡು ಬಂದ್ರೆ, ಸಾರ್ವಜನಿಕರು ದೂರು ನೀಡಬಹುದು ಎಂದಿದ್ದಾರೆ.

5 ಕ್ಕಿಂತ ಹೆಚ್ಚಿನ ಜನ ಒಂದೆಡೆ ಸೇರುವಂತಿಲ್ಲ. ರೆಸ್ಟೊರೆಂಟ್‌ನಲ್ಲಿ ಮುಂಗಡ ಬುಕ್ಕಿಂಗ್ ಇರಬೇಕು
ನೀವು ಹೋಗುವ ಹೊಟೇಲ್‌ಗಳ ಕೂಪನ್ ಇರಬೇಕು
ಕೂಪನ್ ಇದ್ದವರಿಗೆ ಮಾತ್ರ ಹೊರಬರಲು ಅವಕಾಶ ಇದೆ.

ಹೊಟೇಲ್‌ಗಳ ಹೊರಗೆ ಯಾರೂ ಸೇರುವಂತಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ವರ್ಷಾಚರಣೆಗೆ ಅವಕಾಶ ನೀಡಲಾಗಿದ್ದು, ಅಪಾರ್ಟ್‌ಮೆಂಟ್ ನಿವಾಸಿಗಳು ಮಾತ್ರ ಭಾಗಿಯಾಗಬಹುದು ಎಂದಿದ್ದಾರೆ.

ವೀಲಿಂಗ್, ಡ್ರಾಗ್ ರೇಸ್ ಮಾಡಿದ್ರೆ ವಾಹನ ಸೀಜ್ ಮಾಡಲಾಗುತ್ತದೆ. 31ರ ರಾತ್ರಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲಾಗುತ್ತದೆ. ನಿಯಮ ಉಲ್ಲಂಘಿಸಿದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...