ಫಾಸ್ಟ್ಯಾಗ್ ಅಪ್ಲಿಕೇಶನ್ಗೆ ಅಪ್ಡೇಟ್ ಮಾಡುವ ಮೂಲಕ ಬಳಕೆದಾರರಿಗೆ ತಂತಮ್ಮ ಖಾತೆಗಳಲ್ಲಿ ಇರುವ ಬಾಕಿ ಮೊತ್ತವನ್ನು ನೋಡಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.
ಜನವರಿ 1, 2021ರಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮದ ಅನುಷ್ಠಾನವನ್ನು ಸಲೀಸಾಗಿ ಮಾಡಲು ಎನ್ಎಚ್ಎಐ ತನ್ನ ಮೊಬೈಲ್ ಅಪ್ಲಿಕೇಶನ್ಗೆ ಅಪ್ಡೇಟ್ ಒಂದನ್ನು ಮಾಡಿದೆ.
ಮೈ ಫಾಸ್ಟ್ಯಾಗ್ ಆಪ್ನಲ್ಲಿ ಇರುವ ಹೊಸ ಫೀಚರ್ ಆದ ’ಚೆಕ್ ಬ್ಯಾಲೆನ್ಸ್ ಸ್ಟೇಟಸ್’ ಆಯ್ಕೆ ಮಾಡಿಕೊಂಡು, ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿದರೆ ನಿಮ್ಮ ಬ್ಯಾಲೆನ್ಸ್ ತಿಳಿದುಕೊಳ್ಳಬಹುದಾಗಿದೆ.