ತನ್ನನ್ನು ಬಿಟ್ಟು ಶಾಶ್ವತವಾಗಿ ಹೊರಟುಹೋಗಿರುವ ಮಗನ ಹೃದಯದ ಬಡಿತದಂತೆ ಶಬ್ದ ಮಾಡುವ ಟೆಡ್ಡಿ ಬೇರ್ ಒಂದನ್ನು ಗಿಫ್ಟ್ ಆಗಿ ಪಡೆದ ತಂದೆಯೊಬ್ಬರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಗೊಂಬೆಯನ್ನು ಹದಿಹರೆಯದ ಹುಡುಗನ ಹೃದಯವನ್ನು ಕಸಿ ಮಾಡಿಸಿಕೊಂಡ ವ್ಯಕ್ತಿ ಆ ಹುಡುಗನ ತಂದೆಗೆ ಕಳುಹಿಸಿದ್ದಾರೆ. 16 ವರ್ಷದ ವಯಸ್ಸಿನ ಈ ಹುಡುಗ ರಸ್ತೆ ಅಪಘಾತವೊಂದರಲ್ಲಿ ನಿಧನವಾದ ಬಳಿಕ ಆತನ ಅಂಗಾಂಗಗಳನ್ನು ದಾನ ಮಾಡಲಾಗಿತ್ತು. ಹುಡುಗನ ಹೃದಯ ಬಡಿತವನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ವಿಶೇಷವಾದ ಡಿವೈಸ್ನಲ್ಲಿ ಟೆಡ್ಡಿ ಬೇರ್ ಒಳಗೆ ಇಡಲಾಗಿದೆ.
ಫೆಬ್ರವರಿಯಲ್ಲಿ ಸ್ಟೆಪಾನಿ ರೀಯ್ಡ್ ಎಂಬಾಕೆ ಶೇರ್ ಮಾಡಿಕೊಂಡ ಈ ವಿಡಿಯೋದಲ್ಲಿ ಆಕೆಯ ಪತಿ ರಾಬರ್ಟ್ ಒ’ಕಾನರ್ ಈ ಗೊಂಬೆಯನ್ನು ಸ್ವೀಕರಿಸುತ್ತಲೇ ಕಣ್ಣೀರಿಡುತ್ತಿರುವುದನ್ನು ನೋಡಬಹುದಾಗಿದೆ.