ಭಾರತೀಯ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ಕೊಡುತ್ತಿರುವ ಕಾಣಿಕೆಗಳಿಗೆ ಈ ತಲೆಮಾರಿನ ಆಟಗಾರರ ಪೈಕಿ ಸಾಟಿಯೇ ಇಲ್ಲ ಎನ್ನಬಹುದಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 66 ಶತಕಗಳು, 94 ಅರ್ಧ ಶತಕಗಳು ಸೇರಿದಂತೆ ಒಟ್ಟಾರೆ 20,396 ರನ್ ಗಳಿಸಿರುವ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಅನೇಕ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಕೊಹ್ಲಿ ಅವರ ಈ ಅಸಾಧಾರಣ ಸಾಧನೆಯನ್ನು ಶ್ಲಾಘಿಸಿರುವ ಐಸಿಸಿ, ಟೀಂ ಇಂಡಿಯಾ ನಾಯಕನಿಗೆ ದಶಕದ ಕ್ರಿಕೆಟರ್ಗೆ ಕೊಡಲಾಗುವ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಕೊಟ್ಟು ಸನ್ಮಾನಿಸಿದೆ. ಈ ವಿಚಾರವನ್ನು ಐಸಿಸಿ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಇದೇ ವೇಳೆ, ಹತ್ತು ವರ್ಷಗಳ ಹಿಂದೆ ಕೊಹ್ಲಿ ಮಾಡಿದ್ದ ಪೋಸ್ಟ್ ಒಂದನ್ನು ಅವರ ಅಭಿಮಾನಿಗಳು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಕಳೆದ ದಶಕದಲ್ಲಿ ಅವರು ನಡೆದು ಬಂದ ಹಾದಿಯನ್ನು ಸ್ಮರಿಸಿದ್ದಾರೆ. “ನನ್ನ ತಂಡಕ್ಕಾಗಿ ಹೆಚ್ಚು ಹೆಚ್ಚು ರನ್ ಗಳಿಸಲು ನೋಡುತ್ತಿದ್ದೇನೆ” ಎಂದು ಕೊಹ್ಲಿ ಈ ಟ್ವೀಟ್ನಲ್ಲಿ ಹೇಳಿಕೊಂಡಿದ್ದರು.