ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಆರು ವಿದ್ಯಾರ್ಥಿಗಳ ವಿರುದ್ಧ ಪ್ರಾಂಶುಪಾಲರು ದೇಶದ್ರೋಹ ಪ್ರಕರಣ ದಾಖಲಿಸಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ.
ಸಾಕೇತ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಎನ್.ಡಿ. ಪಾಂಡ್ಯ, ವಿದ್ಯಾರ್ಥಿಗಳಾದ ಸುಮಿತ್ ತಿವಾರಿ, ಶೇಷ್ ನಾರಾಯಣ ಪಾಂಡ್ಯ, ಇಮ್ರಾನ್ ಹಶ್ಮಿ, ಸಾತ್ವಿಕ್ ಪಾಂಡ್ಯ, ಮೋಹಿತ್ ಯಾದವ್ ಮತ್ತು ಮನೋಜ್ ಮಿಶ್ರಾ ವಿರುದ್ಧ ಇಂಥದ್ದೊಂದು ಗಂಭೀರ ಪ್ರಕರಣ ದಾಖಲಿಸಿದ್ದಾರೆ.
ಈ ವಿದ್ಯಾರ್ಥಿಗಳು ‘ಆಜಾದಿ ಲೇಕೆ ರಹೇಂಗೆ’ ಎನ್ನುವ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಪ್ರಾಂಶುಪಾಲರದ್ದಾಗಿದ್ದು, ಆದರೆ ವಿದ್ಯಾರ್ಥಿಗಳು, ಭ್ರಷ್ಟ ಪ್ರಾಂಶುಪಾಲರಿಂದ ಆಜಾದಿ ಬಯಸಿ ನಾವು ಘೋಷಣೆ ಕೂಗಿದ್ದೇವೆ. ದೇಶ ವಿರೋಧಿ ಘೋಷಣೆ ಕೂಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.