alex Certify ಗೆಲುವಿಗೂ ಮುನ್ನ ಸಂಭ್ರಮಿಸಲು ಹೋಗಿ ಪೇಚಿಗೆ ಸಿಲುಕಿದ​ ರೇಸರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಲುವಿಗೂ ಮುನ್ನ ಸಂಭ್ರಮಿಸಲು ಹೋಗಿ ಪೇಚಿಗೆ ಸಿಲುಕಿದ​ ರೇಸರ್​..!

ಬ್ರೆಜಿಲ್​ನಲ್ಲಿ ಬೈಕ್ ರೇಸರ್​ ಒಬ್ಬ ಗುರಿ ಮುಟ್ಟುವ ಮೊದಲೇ ಗೆಲುವನ್ನ ಸಂಭ್ರಮಿಸೋಕೆ ಹೋಗಿ ಮೊದಲ ಸ್ಥಾನವನ್ನ ಕಳೆದುಕೊಂಡು ಮುಖಭಂಗಕ್ಕೀಡಾಗಿದ್ದಾನೆ. ಆಂಡ್ರೆ ವೆರಿಸ್ಸಿಮೊ ಎಂಬಾತ ಗುರಿ ತಲುಪಲು ಇನ್ನೇನು ಕೆಲವೇ ಮೀಟರ್​ ದೂರ ಇದೆ ಅನ್ನೋವಾಗ ತಾನೇ ಮಾಡಿದ ಎಡವಟ್ಟಿನಿಂದಾಗಿ ವಿಜೇತ ಎಂಬ ಪಟ್ಟವನ್ನ ಇನ್ನೊಬ್ಬರಿಗೆ ಬಿಟ್ಟುಕೊಟ್ಟಿದ್ದಾನೆ.

ಬ್ರೆಜಿಲ್​ನ ಗೊಯಾನಾ ಎಂಬಲ್ಲಿ ನಡೆದ ಅಂತಾರಾಷ್ಟ್ರೀಯ ಬೈಕ್​ ರೇಸ್​ನಲ್ಲಿ ಆಂಡ್ರೆ ಭಾಗಿಯಾಗಿದ್ದರು. ಇನ್ನುಳಿದ ಸ್ಪರ್ಧಿಗಳಿಗಿಂತ ಸಾಕಷ್ಟು ಮುನ್ನಡೆಯನ್ನ ಕಾಯ್ದುಕೊಳ್ಳುವಲ್ಲಿ ಆಂಡ್ರೆ ಯಶಸ್ವಿ ಕೂಡ ಆಗಿದ್ದರು. ಇನ್ನೇನು ಆಂಡ್ರೆ ವಿನ್ನರ್ ಆಗ್ತಾರೆ ಅಂತಾನೇ ಎಲ್ಲರೂ ಭಾವಿಸಿದ್ದರು.

ಆಂಡ್ರೆ ಕೂಡ ಗೆಲುವಿನ ದಡವನ್ನ ಸೇರುವ ಕೆಲವೇ ಸೆಕೆಂಡ್​ಗಳ ಮುಂಚೆ ಬೈಕ್​ ಮೇಲೆ ನಿಂತು ಸಂಭ್ರಮಿಸೋಕೆ ಹೋಗಿದ್ದಾರೆ. ಆದರೆ ಅವರ ಈ ತಪ್ಪಿನಿಂದಾಗಿ ಅವರ ಹಿಂದಿದ್ದ ಇಬ್ಬರು ರೇಸರ್​ಗಳು ಆಂಡ್ರೆ ಹಿಂದಿಕ್ಕಿ ಮೊದಲ ಎರಡು ಸ್ಥಾನಗಳನ್ನ ಬಾಚಿಕೊಂಡ್ರು. ವಿನ್ನರ್​ ಆಗಬೇಕಿದ್ದ ಆಂಡ್ರೆ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಯ್ತು.

ಇನ್ನು ಈ ವಿಚಾರವಾಗಿ ಮಾತನಾಡಿದ ಆಂಡ್ರೆ ನಾನು ಹಿಂದೆ ಇಬ್ಬರನ್ನ ನೋಡುತ್ತಿದ್ದಂತೆಯೇ ಬೈಕ್​ನ ಎಕ್ಸಲೇಟರ್​ನ್ನು ಹೆಚ್ಚಿಸಿದೆ. ಆದರೆ ನನ್ನ ಬೈಕ್​ ಮೂರನೇ ಗಿಯರ್​ನಲ್ಲಿದ್ದ ಕಾರಣ ಬೈಕ್​ ತುಂಬಾ ಸ್ಲೋ ಆಗಿ ಚಲಿಸಿತು. ಹೀಗಾಗಿ ಇಬ್ಬರು ನನ್ನನ್ನ ಹಿಂದಿಕ್ಕಿದ್ದರು ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

https://www.instagram.com/tv/CJInSoYjrNp/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...