alex Certify ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಬಯಲಿಗೆ ಬಂತು ನಕಲಿ ಕರೆನ್ಸಿ ಜಾಲ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಬಯಲಿಗೆ ಬಂತು ನಕಲಿ ಕರೆನ್ಸಿ ಜಾಲ…!

ಆಟೋ ಚಾಲಕನ ನೆರವಿನಿಂದ ನಗರದಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ನಕಲಿ ಕರೆನ್ಸಿ ದಂಧೆಯನ್ನ ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.

ಪ್ರಕರಣ ಸಂಬಂಧ ಆರೋಪಿಗಳಾದ ಮೊಹಮ್ಮದ್ ಇಮ್ರಾನ್​, ಮುಬಾರಕ್​ ಹಾಗೂ ಜಮಾಲ್​ ಅಖ್ತರ್​​ ಎಂಬವರನ್ನ ಬಂಧಿಸಲಾಗಿದೆ.

ಈ ಮೂವರಲ್ಲಿ ಒಬ್ಬ ಆಟೋ ಡ್ರೈವರ್​ಗೆ ನಕಲಿ ನೋಟು ನೀಡಲು ಹೋಗಿ ಪೊಲೀಸ್ ಠಾಣೆ ಅತಿಥಿಯಾಗಿದ್ದಾರೆ.

ಮೊಹಮ್ಮದ್​ ಇಮ್ರಾನ್​​ ಸಿಟಿ ಮಾರ್ಕೆಟ್​​ನಲ್ಲಿ ಆಟೋ ಹತ್ತಿದ್ದ. ಶಾಂತಿ ನಗರದ ಬಸ್​ ನಿಲ್ದಾಣದಲ್ಲಿ ಇಳಿಯುವ ಸಂದರ್ಭ ಬಂದ ವೇಳೆ ಮೊಹಮ್ಮದ್​​ 100 ರೂಪಾಯಿ ನೋಟನ್ನ ಆಟೋ ಡ್ರೈವರ್​ಗೆ ನೀಡಿದ್ದಾನೆ. ಆದರೆ ಆಟೋ ಚಾಲಕನಿಗೆ ಅದು ನಕಲಿ ನೋಟು ಎಂಬುದು ತಕ್ಷಣವೇ ತಿಳಿದು ಬಂದಿದೆ.

ಕೂಡಲೇ ಆಟೋ ಚಾಲಕ ಇಮ್ರಾನ್​ರನ್ನ ವಿಲ್ಸನ್​ ಗಾರ್ಡನ್​​ನಲ್ಲಿರುವ ಠಾಣೆಗೆ ಕರೆದೊಯ್ದಿದ್ದಾರೆ. ಇಮ್ರಾನ್​ ಹೇಳಿಕೆ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನ ಖೆಡ್ಡಾಗೆ ಕೆಡವಿದ್ದಾರೆ. ಬಂಧಿತರಿಂದ ಶಾಯಿ ಬಾಟಲಿ, ಎ 4 ಗಾತ್ರದ ಹಾಳೆಗಳು, ಮುದ್ರಣ ಪರದೆಗಳು, ಸಿಪಿಯು, ಕೀ ಬೋರ್ಡ್ ಹಾಗೂ ಪೆನ್​​ ಡ್ರೈವ್​ಗಳನ್ನ ವಶಕ್ಕೆ ಪಡೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...