alex Certify ಭೂಮಿಯ ಸುತ್ತಳತೆಯಷ್ಟು ದೂರ ಕ್ರಮಿಸಿ ವೃದ್ಧನ ವಿಶ್ವ ದಾಖಲೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಮಿಯ ಸುತ್ತಳತೆಯಷ್ಟು ದೂರ ಕ್ರಮಿಸಿ ವೃದ್ಧನ ವಿಶ್ವ ದಾಖಲೆ..!

ಭಾರತೀಯ ಮೂಲದ ಐರಿಶ್​ ವ್ಯಕ್ತಿಯೊಬ್ಬರು ಭೂಮಿಯ ಸುತ್ತಳತೆಗೆ ಸಮನಾಗಿ ನಡೆಯುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಹೀಗಾಗಿ ಗಿನ್ನೆಸ್​ ವಿಶ್ವ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಆದರೆ ವಿಚಿತ್ರ ಅಂದರೆ ಇವರು ಭೂಮಿಯ ಸುತ್ತ ಎಂದಿಗೂ ನಡೆದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ 70 ವರ್ಷದ ವಿನೋದ್​ ಬಜಾಜ್​ ಐರಿಶ್​ ನಗರವಾದ ಲಿಮೆರಿಕ್​​ನಲ್ಲಿ 40,075 ಕಿಲೋಮೀಟರ್​ ನಡೆದಿದ್ದಾರೆ.

ಈ ದೂರವು ಭೂಮಿಯ ಸುತ್ತಳತೆಗೆ ಸಮನಾಗಿದೆ. ನಿವೃತ್ತ ವ್ಯಾಪಾರ ಸಲಹೆಗಾರ ಭಾರತದಲ್ಲಿ ಜನಿಸಿದ್ದು ಐರ್ಲೆಂಡ್​​ನಲ್ಲಿ 43 ವರ್ಷಗಳಿಂದ ವಾಸ್ತವ್ಯ ಹೂಡಿದ್ದಾರೆ.

ಸೆಪ್ಟೆಂಬರ್ನಲ್ಲಿ 8322 ಗಂಟೆಗಳಲ್ಲಿ 54.6 ದಶಲಕ್ಷಕ್ಕೂ ಹೆಚ್ಚಿನ ಹೆಜ್ಜೆಗಳನ್ನ ಪೂರ್ಣಗೊಳಿಸಿದ ನಂತರ ಒಂದು ಮಿಲಿಯನ್​ಗೂ ಹೆಚ್ಚು ಕ್ಯಾಲೋರಿ ಕರಗಿಸಿದ್ದಾರೆ. ಈ ವೇಳೆಗೆ ಅವರು 40,075 ಕಿಲೋಮೀಟರ್​ ವ್ಯಾಪ್ತಿಯನ್ನ ಪೂರ್ಣಗೊಳಿಸಿದ್ದಾರೆ.

2016ರಲ್ಲಿ ತೂಕ ಇಳಿಸುವ ಇರಾದೆಯಿಂದ ಬಜಾಜ್​ ವಾಕ್​ ಮಾಡಲು ಆರಂಭಿಸಿದರು. ತಮ್ಮ ನಡಿಗೆಯನ್ನ ಲೆಕ್ಕದಲ್ಲಿಟ್ಟುಕೊಳ್ಳಲು ಬಜಾಜ್​ ಮೊಬೈಲ್​ ಟ್ರ್ಯಾಕರ್​ ಬಳಕೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...