ಸಂವಹನ ನಡೆಸಲು ಹೆಣಗಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ಜೀವನದಲ್ಲಿ ಬಂದ ನಾಯಿಯೊಂದು ಆತನ ಸಂವಹನ ಕೌಶಲ್ಯವನ್ನ ಸುಧಾರಿಸಿದ ವಿಶೇಷ ಘಟನೆ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ.
ನಾಲ್ಕು ವರ್ಷದ ಲಿಯಾನ್ ಕುರ್ಬಿ ಮಾತನಾಡೋಕೆ ಹೆಣಗಾಡುತ್ತಿದ್ದ. ಬಳಿಕ ಈತ ಕಾಕರ್ ಸ್ಪೈನಿಯೆಲ್ ಎಂಬ ನಾಯಿಯ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದ.
ಇವರಿಬ್ಬರು ಕಾಲ ಕ್ರಮೇಣ ಉತ್ತಮ ಸ್ನೇಹಿತರಾಗಿ ಬಿಟ್ಟಿದ್ದರಂತೆ. ಲಿಯಾನ್ ಉತ್ತಮ ಸಂವಹನಕಾರನಲ್ಲ. ಆದರೆ ಆದನ ಮೊದಲ ಸಂವಹನ ನಡೆದದ್ದು ಮಾತ್ರ ಶ್ವಾನದ ಜೊತೆ.
ಇವರಿಬ್ಬರ ನಡುವಿನ ಸಕಾರಾತ್ಮಕ ಬಂಧದಿಂದ ಲಿಯಾನ್ ಈಗ ಚೆನ್ನಾಗಿ ಮಾತನಾಡುತ್ತಾನೆ. ಎಷ್ಟೆಂದರೆ ಕೆಲವೊಮ್ಮೆ ಆತ ಮಾತನಾಡೋದನ್ನೇ ನಿಲ್ಲಿಸೋದಿಲ್ಲ ಎಂದು ತಾಯಿ ಹೇಳಿಕೊಂಡಿದ್ದಾರೆ.
https://www.facebook.com/aboyandhisspecialdog/videos/400241317756422/?t=14