alex Certify ದೇಗುಲದ ಅಡಿಪಾಯಕ್ಕೆ11 ಸಾವಿರ ಲೀಟರ್​ ಹಾಲಿನ ಉತ್ಪನ್ನ ಸುರಿದ ಭಕ್ತರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಗುಲದ ಅಡಿಪಾಯಕ್ಕೆ11 ಸಾವಿರ ಲೀಟರ್​ ಹಾಲಿನ ಉತ್ಪನ್ನ ಸುರಿದ ಭಕ್ತರು…!

Over 10,000 Litres of Milk, Curd Poured in Foundation Pit for Rajasthan's  Devnarayan Temple | India.comದೇವಸ್ಥಾನ ನಿರ್ಮಾಣಕ್ಕೆ ತೋಡಲಾದ ಅಡಿಪಾಯಕ್ಕೆ ಗ್ರಾಮಸ್ಥರು ಹಾಲು, ಮೊಸರು ಹಾಗೂ ದೇಸಿ ತುಪ್ಪದ ಬರೋಬ್ಬರಿ 11 ಸಾವಿರ ಲೀಟರ್​ ಮಿಶ್ರಣವನ್ನ ಸುರಿದ ವಿಶಿಷ್ಟ ಆಚರಣೆ ರಾಜಸ್ಥಾನದ ಜಲ್ವಾರ್​ ಜಿಲ್ಲೆಯ ರತ್ಲೈ ಪ್ರದೇಶದಲ್ಲಿ ನಡೆದಿದೆ. ಇಲ್ಲಿ ದೇವ ನಾರಾಯಣ ದೇವಾಲಯವನ್ನ ನಿರ್ಮಿಸಲಾಗುತ್ತಿದೆ.

ದೇವ ಭಗವಾನ್​ ದೇವನಾರಾಯಣರಿಗೆ ಗೌರವದ ಸಂಕೇತವಾಗಿ ದೇವ್​ ನಾರಾಯಣ್​ ದೇಗುಲವನ್ನ ನಿರ್ಮಿಸುತ್ತಿದ್ದೇವೆ. ಅಡಿಪಾಯ ಸಮಾರಂಭಕ್ಕಾಗಿ ಗುಜ್ಜರ್​ ಸಮುದಾಯ ಹಾಗೂ ಇತರರು ಸೇರಿ 11 ಸಾವಿರ ಲೀಟರ್​ನಷ್ಟು ಹಾಲು, ಮೊಸರು ಹಾಗೂ ದೇಸಿ ತುಪ್ಪವನ್ನ ಸಂಗ್ರಹಿಸಿದ್ದೆವು ಎಂದು ದೇಗುಲ ನಿರ್ಮಾಣ ಸಮಿತಿ ವಕ್ತಾರ ರಾಮ್​ಲಾಲ್​​ ಗುಜ್ಜರ್​ ಹೇಳಿದ್ರು.

11 ಸಾವಿರ ಲೀಟರ್​​ನಲ್ಲಿ 1500 ಲೀಟರ್ ಮೊಸರು, 1 ಕ್ವಿಂಟಲ್​ ದೇಸಿ ತುಪ್ಪ ಹಾಗೂ ಉಳಿದವು ಹಾಲಾಗಿದೆ. ಇದಕ್ಕೆ ಸುಮಾರು 1.50 ಲಕ್ಷ ರೂಪಾಯಿ ಅಂದಾಜು ವೆಚ್ಚವಾಗಿದೆ. ಇಂತಹ ಸಮಾರಂಭಗಳಿಗೆ ಹಾಲು ಹಾಕುವ ಸಂಪ್ರದಾಯ ಕಡ್ಡಾಯವೇ ಎಂದು ಕೇಳಿದಾಗ ಇದು ಕಡ್ಡಾಯವಲ್ಲ. ಆದರೆ ಈ ಹಿಂದೆ ಹಲವು ಬಾರಿ ಈ ರೀತಿ ಮಾಡಿದ್ದೇವೆ ಎಂದು ರಾಮ್​ಲಾಲ್​ ಹೇಳಿದ್ರು.

ದೇವನಾರಾಯಣ್​ ದೇವರಿಗೆ ಹಾಲು ಸುರಿಯೋದ್ರಿಂದ ಜಾನುವಾರುಗಳನ್ನ ದೇವರು ಕಾಪಾಡುತ್ತಾನೆ ಎಂಬುದು ನಂಬಿಕೆಯಾಗಿದೆ. 1 ಕೋಟಿ ರೂಪಾಯಿ ಮೊತ್ತದಲ್ಲಿ ದೇಗುಲ ನಿರ್ಮಾಣ ಕಾರ್ಯ ನಡೆಯುತ್ತಿದ್ದು 2 ವರ್ಷದಲ್ಲಿ ದೇಗುಲ ಲೋಕಾರ್ಪಣೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...