ಹಳ್ಳಿಯಲ್ಲಿ ರಾತ್ರಿಯಿಡೀ ಭೂಮಿ ಉಳುಮೆ ಮಾಡಿ ಬೆಳಗ್ಗೆ ಶೂ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ರೈತನ ಮೂವರು ಹೆಣ್ಣು ಮಕ್ಕಳು ರಾಜಸ್ಥಾನದ ಜುಂಜುನು ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಪದವಿ ಪಡೆಯೋ ಮೂಲಕ ಸಾಧನೆ ಮಾಡಿದ್ದಾರೆ.
ಭೌಗೋಳಿಕ ವಿಷಯದಲ್ಲಿ ಸರಿತಾ ತಿಲೋಟಿಯಾ ಡಾಕ್ಟರೇಟ್ ಪದವಿ ಪಡೆದ್ರೆ , ಕಿರಣ್ ತಿಲೋಟಿಯಾ ರಸಾಯನ ಶಾಸ್ತ್ರ ಹಾಗೂ ಅನಿತಾ ತಿಲೋಟಿಯ ಶಿಕ್ಷಣ ವಿಭಾಗದಲ್ಲಿ ಪಿ ಹೆಚ್ ಡಿ ಪದವಿಗೆ ಭಾಜನರಾಗಿದ್ದಾರೆ.
ಮೂವರು ಸಹೋದರಿಯರಿಗೆ ಒಂದೇ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ನೀಡಲಾಗಿದ್ದು ಇದು ದೇಶದಲ್ಲಿ ನಡೆದ 2ನೇ ಘಟನೆಯಾಗಿದೆ. ಮೂವರಿಗೂ ಜಗದೀಶ್ಪ್ರಸಾದ್ ಝಬರ್ಮರ್ಲ್ ತಿಬೆರ್ವಾಲಾ ವಿಶ್ವವಿದ್ಯಾಲಯದಿಂದ ಪಿಹೆಚ್ಡಿ ಪ್ರದಾನ ಮಾಡಲಾಯ್ತು.
ಇದಕ್ಕೂ ಮೊದಲು ಮಧ್ಯಪ್ರದೇಶದಲ್ಲಿ ಮೂವರು ಸಹೋದರಿಯರು ಇದೇ ರೀತಿ ಒಂದೇ ಬಾರಿಗೆ ಪಿಹೆಚ್ಡಿ ಪದವಿ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದರು.