ಹೈದರಾಬಾದ್: ಗೂಗಲ್ ಪ್ಲೇಸ್ಟೋರ್ ನಿಂದ ತ್ವರಿತ ಸಾಲ, ಕಿರುಕುಳ ನೀಡುವ 158 ಲೋನ್ ಆಪ್ ಗಳನ್ನು ತೆರವುಗೊಳಿಸುವಂತೆ ತೆಲಂಗಾಣ ಪೊಲೀಸರು ಪತ್ರ ಬರೆದಿದ್ದಾರೆ.
ಹೆಚ್ಚಿನ ಬಡ್ಡಿಗೆ ಸಾಲ ವಿತರಿಸುವ ಆಪ್ ಗಳು ಗ್ರಾಹಕರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದು, ಸುಸ್ತಿದಾರರಿಗೆ ಅವಮಾನ ಮಾಡಿ ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಈ ಕಾರಣದಿಂದ ಲೋನ್ ಆಪ್ ತೆರವಿಗೆ ತಿಳಿಸಲಾಗಿದೆ.
ಹೈದರಾಬಾದ್ ಪೊಲೀಸ್ ಜಂಟಿ ಆಯುಕ್ತರು ಈ ಬಗ್ಗೆ ಮಾಹಿತಿ ನೀಡಿದ್ದು, ಸಂತ್ರಸ್ತರ ದೂರು ಆಧರಿಸಿ ಕಿರಿಕಿರಿ ಉಂಟು ಮಾಡಿದ 158 ಲೋನ್ ಆಪ್ ಗಳನ್ನು ಪಟ್ಟಿ ಮಾಡಿ ಪತ್ರ ಬರೆದಿದ್ದು, ಗೂಗಲ್ ನಿಂದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.