ನವದೆಹಲಿ: ಆರ್ಥಿಕ ಬೆಳವಣಿಗೆ ಆಧರಿಸಿ ಹೊಸ ವರ್ಷದಲ್ಲಿ ಚಿನ್ನದ ದರ 63,000 ರೂ.ಗೆ ಏರಿಕೆ ಆಗುವ ಸಾಧ್ಯತೆ ಇದೆ.
2020 ರಲ್ಲಿ ಚಿನ್ನದ ದರ ತೀವ್ರವಾಗಿ ಏರಿಕೆಯಾಗಿದ್ದು, 2021 ರಲ್ಲಿಯೂ ದರ ಹೆಚ್ಚಾಗಿ 10 ಗ್ರಾಂಗೆ 63 ಸಾವಿರ ರೂಪಾಯಿವರೆಗೂ ತಲುಪಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.
ಡಾಲರ್ ಮೌಲ್ಯ ದುರ್ಬಲವಾಗುತ್ತಿರುವ ಕಾರಣ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಲಿದೆ. 2020 ರಲ್ಲಿ ಕೊರೋನಾದಿಂದ ಆರ್ಥಿಕತೆಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಇದರ ಪರಿಣಾಮ ಷೇರುಪೇಟೆ ಕುಸಿತವಾಗಿತ್ತು. ಷೇರುಪೇಟೆಯ ಅನಿಶ್ಚಿತತೆಯ ಕಾರಣ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿದ್ದರು. 2021 ರಲ್ಲಿಯೂ ಚಿನ್ನದ ದರ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.