ಬೆಂಗಳೂರು: ಸಂಕ್ರಾಂತಿ ನಂತರ ಕುಮಾರಸ್ವಾಮಿ ನಿರ್ದೇಶನದಂತೆ ಪಕ್ಷ ಸಂಘಟನೆ ನಡೆಯಲಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ.
ಜನವರಿ 7 ರಂದು ಪಕ್ಷದ ನಾಯಕರ ಸಭೆ ನಡೆಯಲಿದ್ದು, ಪಕ್ಷದ ಮುಂದಿನ ನಡೆಯ ಕುರಿತಾಗಿ ಕುಮಾರಸ್ವಾಮಿ ತಮ್ಮ ಚಿಂತನೆ ಹಂಚಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದು, ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಕುಮಾರಸ್ವಾಮಿ ವಹಿಸಿಕೊಳ್ಳುವುದರ ಕುರಿತಾಗಿ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ. ನಮಗೆ ಯಾವ ಹೈಕಮಾಂಡ್ ಇಲ್ಲ. ರಾಜಕಾರಣದಲ್ಲಿ ಸೋಲು-ಗೆಲುವು ಸಹಜ. ಪಕ್ಷದ ಕುರಿತಾಗಿ ಹಗುರವಾಗಿ ಮಾತನಾಡುವುದು ಸರಿಯಲ್ಲ. ನಾನು ಮತ್ತು ಕುಮಾರಸ್ವಾಮಿ ಹೊರತಾಗಿಯೂ ಜೆಡಿಎಸ್ ಪಕ್ಷದಲ್ಲಿ ಅನೇಕ ನಾಯಕರಿದ್ದಾರೆ. ಯಾರೊಬ್ಬರ ಮೇಲೆಯೂ ಪಕ್ಷ ನೆಚ್ಚಿಕೊಂಡಿಲ್ಲ. ನಾನು ಹೋದ ಮೇಲೆ ಜೆಡಿಎಸ್ ಇರುತ್ತದೆ. ಕೋರ್ ಕಮಿಟಿಯಲ್ಲಿಯೇ ಎಲ್ಲ ತೀರ್ಮಾನ ಕೈಗೊಳ್ಳಲಾಗುತ್ತದೆ. ಪಕ್ಷಕ್ಕೆ ಕಾರ್ಯಕರ್ತರ ಪಡೆ ದೊಡ್ಡದಾಗಿದ್ದು, ಅಂತಹ ಕಾರ್ಯಕರ್ತರಿಗೆ ಜವಾಬ್ದಾರಿ, ಅವಕಾಶ ಕೊಡಲಾಗುವುದು ಎಂದು ಹೇಳಿದ್ದಾರೆ.