alex Certify ಶಾಕಿಂಗ್: ಇನ್ನೂ 10 ವರ್ಷಗಳ ಕಾಲ ನಮ್ಮೊಟ್ಟಿಗೇ ಇರಲಿದೆ ಕೊರೊನಾ ವೈರಸ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಇನ್ನೂ 10 ವರ್ಷಗಳ ಕಾಲ ನಮ್ಮೊಟ್ಟಿಗೇ ಇರಲಿದೆ ಕೊರೊನಾ ವೈರಸ್.​..!

ಕೊರೊನಾ ವೈರಸ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದ ಸಂಪೂರ್ಣ ವಿಶ್ವ ಇದೀಗ ರೂಪಾಂತರಿ ಕೊರೊನಾ ವೈರಸ್​ ಭಯದಲ್ಲಿದೆ. ಈ ನಡುವೆ ಬಯೋಟೆಕ್​ ಸಿಇಓ ಉಗುರ್​ ಸಾಹಿನ್​ ಇನ್ನೂ ಒಂದು ದಶಕಗಳ ಕಾಲ ಕೊರೊನಾ ವೈರಸ್​ ನಮ್ಮ ಜೊತೆಯೇ ಇರಲಿದೆ ಎಂಬ ಆಘಾತಕಾರಿ ಮಾಹಿತಿಯನ್ನ ನೀಡಿದ್ದಾರೆ.

ಪತ್ರಿಕಾಗೋಷ್ಠಿಯೊಂದರಲ್ಲಿ ಕೊರೊನಾ ವೈರಸ್​ ಇನ್ನೂ ಎಷ್ಟು ಸಮಯ ನಮ್ಮ ಮಧ್ಯೆ ಇರಬಹುದು ಎಂದು ಕೇಳಲಾದ ಪ್ರಶ್ನೆಗೆ ಸಾಹಿನ್​ ಈ ಉತ್ತರ ನೀಡಿದ್ರು.

ಸಾಮಾನ್ಯ ಜೀವನಕ್ಕೆ ವಾಪಸ್ಸಾಗೋದು ಸುಲಭದ ಮಾತಲ್ಲ. ಮುಂದಿನ 10 ವರ್ಷಗಳ ಕಾಲ ಈ ವೈರಸ್​ ನಮ್ಮೊಟ್ಟಿಗೇ ಇರಲಿದೆ ಎಂದು ಹೇಳಿದ್ದಾರೆ.
ಅಮೆರಿಕ ಔಷಧೀಯ ಸಂಸ್ಥೆ ದೈತ್ಯ ಫೈಜರ್​ನೊಂದಿಗೆ ಸೇರಿದ ಬಯೋಟೆಕ್​ ಕೊರೊನಾ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸಿದ್ದು ಈಗಾಗಲೇ ಅಮೆರಿಕ, ಬ್ರಿಟನ್​ ಸೇರಿದಂತೆ ವಿಶ್ವದ 45 ರಾಷ್ಟ್ರಗಳಲ್ಲಿ ತುರ್ತು ಅನುಮೋದನೆ ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...