ಚಿಪ್ಪು ಹೊಂದಿರುವ ಸಮುದ್ರ ಜೀವಿಗಳ ಸೇವನೆಯಿಂದ ಅಲರ್ಜಿ ಸಮಸ್ಯೆ ಎದುರಿಸುತ್ತಿದ್ದ ಬೋಸ್ಟನ್ ವೈದ್ಯ ಮಡರ್ನಾದ ಕೊರೊನಾ ಲಸಿಕೆ ಪಡೆದ ಬಳಿಕ ಅಲರ್ಜಿ ಸಮಸ್ಯೆಯಿಂದ ಬಳಲಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಬೋಸ್ಟನ್ ವೈದ್ಯಕೀಯ ಕೇಂದ್ರದ ಜೆರಿಯಾಟ್ರಿಕ್ ಆಂಕೊಲಾಜಿ ಸಹೋದ್ಯೋಗಿ ಡಾ. ಹೊಸೆನ್ ಸದರ್ಜಾಡೆ ಅವರು ಲಸಿಕೆ ಹಾಕಿದ ಕೂಡಲೇ ತೀವ್ರ ಪ್ರತಿಕ್ರಿಯೆಯನ್ನು ಹೊಂದಿದ್ದಾರೆ, ತಲೆತಿರುಗುವಿಕೆ ಮತ್ತು ಹೃದಯ ಬಡಿತದಲ್ಲಿ ಏರಿಕೆ ಉಂಟಾಗಿದೆ. ಈ ಪ್ರಕರಣ ಮೊಡರ್ನಾ ಲಸಿಕೆಗೆ ಸಂಬಂಧಿಸಿದೆ ಎಂದು ವರದಿಯಾಗಿದೆ.
ಕಳೆದ ವಾರ ಅಮೆರಿಕ 18 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಮಡರ್ನಾ ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಡಿಸೆಂಬರ್ ಅಂತ್ಯದೊಳಗೆ ಅಮೆರಿಕಕ್ಕೆ ಸುಮಾರು 20 ಮಿಲಿಯನ್ ಡೋಸ್ನಗಳನ್ನ ನೀಡೋದಾಗಿ ಮಾಡರ್ನಾ ಸಂಸ್ಥೆ ಹೇಳಿತ್ತು.