alex Certify ಫ್ಲಾರಿಡಾ: ಕೊರೆಯುವ ಚಳಿಯಲ್ಲೂ ಸಾಂಟಾ ಓಡಾಟಕ್ಕಿಲ್ಲ ಅಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲಾರಿಡಾ: ಕೊರೆಯುವ ಚಳಿಯಲ್ಲೂ ಸಾಂಟಾ ಓಡಾಟಕ್ಕಿಲ್ಲ ಅಡ್ಡಿ

Chilly Forecast, Virtually Planned Surfing Santa Day and Falling Iguanas Ring in Christmas Cheer in Florida

ಮೊದಲೇ ಕೋವಿಡ್ ನಿರ್ಬಂಧಗಳ ನಡುವೆ ಆಗಮಿಸಿರುವ ಕ್ರಿಸ್ಮಸ್‌ ಬರಮಾಡಿಕೊಳ್ಳಲು ಸಿದ್ಧರಾಗಿದ್ದ ಫ್ಲಾರಿಡಾದ ಜನತೆಗೆ ವಾತಾವರಣ ಸಹಕರಿಸುವಂತೆ ಕಾಣುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಂಡರಿಯದಷ್ಟು ಚಳಿ ಈ ಬಾರಿ ಆಗುತ್ತಿದೆ.

ಕಳೆದ 21 ವರ್ಷಗಳಲ್ಲಿ ಈ ಬಾರಿ ಅತ್ಯಂತ ಶೀತಮಯ ಕ್ರಿಸ್ಮಸ್‌ಗೆ ದಕ್ಷಿಣ ಫ್ಲಾರಿಡಾ ಸಾಕ್ಷಿಯಾಗಲಿದೆ ಎಂದು ಹವಾಮಾನ ಮುನ್ಸೂಚನಾ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಸಾಮಾನ್ಯವಾಗಿ 25-30 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುವ ತಾಪಮಾನವು -1 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗುವ ಸಾಧ್ಯತೆ ಇದ್ದು, ಜೊತೆಯಲ್ಲಿ ವಿಪರೀತ ತಣ್ಣನೆಯ ಗಾಳಿಯ ಕೊರೆತ ಪರಿಸ್ಥಿತಿಯನ್ನುಇನ್ನಷ್ಟು ಕಠಿಣವಾಗಿಸಿದೆ.

ರಾತ್ರಿ ವೇಳೆ ಹೊರಗಡೆ ಇರುವ ಕಾರಣ ರಾಜ್ಯಾದ್ಯಂತ ಶೆಲ್ಟರ್‌ ಹೋಂಗಳನ್ನು ತೆರೆಯಲಾಗಿದ್ದು, ಮನೆಗಳಿಲ್ಲದ ಮಂದಿಗೆ ಚಳಿಯಿಂದ ಪಾರಾಗಲು ವ್ಯವಸ್ಥೆ ಮಾಡಲಾಗಿದೆ.

ಇಷ್ಟೆಲ್ಲಾ ಇದ್ದರೂ ಸಹ ಸಾಂಟಾ ಕ್ಲಾಸ್ ಹಾಗೂ ಆತನ ಮಡದಿಗೆ ಸಾರಂಗಗಳ ಗಾಡಿಯನ್ನೇರಿಕೊಂಡು ಸಂಚರಿಸಲು ಫ್ಲಾರಿಡಾದ ಕೃಷಿ ಆಯುಕ್ತ ನಿಕ್ಕಿ ಫ್ರೈಡ್ ವಿಶೇಷ ಅನುಮತಿ ಕೊಟ್ಟಿದ್ದಾರೆ. ಡಿಸೆಂಬರ್‌ 24ರ ರಾತ್ರಿ 8 ಗಂಟೆಯಿಂದ ಡಿಸೆಂಬರ್‌ 25ರ ಬೆಳಿಗ್ಗೆ 7 ಗಂಟೆವರೆಗೂ ಸಾಂಟಾ ಅಮೆರಿಕದ ಯಾವ ಜಾಗದಲ್ಲಿ ಬೇಕಾದರೂ ಸಂಚರಿಸಬಹುದು ಎಂದು ಅನುಮತಿ ಕೊಡಲಾಗಿದೆ.

ಇದೇ ವೇಳೆ, ಕ್ರಿಸ್ಮಸ್ ಹಿಂದಿನ ದಿನದಂದು ನಡೆಯುವ ಸರ್ಫಿಂಗ್ ಸಾಂಟಾ ಡೇಅನ್ನು ಆನ್ಲೈನ್‌ನಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಮೊದಲಿನ ಹಾಗೆ ಸಾಮೂಹಿಕವಾಗಿ ನಡೆಸುವ ಬದಲಿಗೆ ಆಸಕ್ತ ಅಭ್ಯರ್ಥಿಗಳು ವೈಯಕ್ತಿಕವಾಗಿ ಸರ್ಫಿಂಗ್ ಮಾಡಿಕೊಂಡು ತಂತಮ್ಮ ಚಿತ್ರಗಳನ್ನು ಸೆರೆ ಹಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...