ಸಾಕು ಪ್ರಾಣಿಗಳ ಅಂಗಡಿಯೊಂದರಲ್ಲಿ $300 ಬೆಲೆ ಬಾಳುವ ಹಾವೊಂದನ್ನು ಕದ್ದು ಓಡಿ ಹೋಗಿರುವ ಜೋಡಿಯೊಂದನ್ನು ಹಿಡಿಯಲು ಮಸ್ಸಾಷುಸೆಟ್ಸ್ನ ಪೀಬಾಡಿ ಪಟ್ಟಣದ ಪೊಲೀಸರು ಬಲೆ ಬೀಸಿದ್ದಾರೆ.
ಸೋಮವಾರ ಸಂಜೆ 4:30ರ ವೇಳಗೆ ಪೆಟ್ಕೋ ಸ್ಟೋರ್ಗೆ ಆಗಮಿಸಿದ ದಂಪತಿಗಳು ಅಂಗಡಿಯಲ್ಲಿದ್ದ ಆಲ್ಬಿನೋ ಸಿನ್ನಾಮನ್ ಬಾಲ್ ಎಂಬ ಕಟ್ಟು ಹಾವಿನೊಂದಿಗೆ ಆಟವಾಡಬಹುದೇ ಎಂದು ಕೇಳಿದ್ದಾರೆ. ಹಾಗೆ ಮಾಡಲು ಆಗುವುದಿಲ್ಲ ಎಂದು ಅಂಗಡಿ ಸಿಬ್ಬಂದಿ ಹೇಳಿದ ಮೇಲೆ, ತಾವು ಈ ಹಾವನ್ನು ಖರೀದಿ ಮಾಡುವುದಾಗಿ ದಂಪತಿ ತಿಳಿಸಿದ್ದಾರೆ.
ಹಾವನ್ನು ಪೆಟ್ಟಿಗೆಯಲ್ಲಿ ಹಾಕಿಕೊಂಡು ನೋಂದಣಿ ಪ್ರದೇಶಕ್ಕೆ ಅಂಗಡಿಯ ಸಿಬ್ಬಂದಿಯೊಬ್ಬರು ತಂದು ಇಟ್ಟಿದ್ದಾರೆ. ಕೌಂಟರ್ನಲ್ಲಿಟ್ಟ ಕೂಡಲೇ ಆ ಡಬ್ಬವನ್ನು ಎತ್ತಿಕೊಂಡ ಜೋಡಿ ಕಾರನ್ನು ಏರಿಕೊಂಡು ಅಲ್ಲಿಂದ ಪರಾರಿಯಾಗಿದೆ.
ಕಾರು ಹೋದ ಜಾಡನ್ನು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.