ಪ್ರತಿಭಟನಾ ನಿರತ ರೈತರಿಗೆ ಬಂತು ಕಿಸಾನ್ ಮಾಲ್…! 26-12-2020 7:08AM IST / No Comments / Posted In: Latest News, India ದೆಹಲಿ-ಹರಿಯಾಣಾ ಗಡಿಯಲ್ಲಿ ಪ್ರತಿಭಟನಾ ನಿರತರಾಗಿರುವ ರೈತರ ನೆರವಿಗೆ ಬಂದಿರುವ ಅಂತಾರಾಷ್ಟ್ರೀಯ ಮಟ್ಟದ ಎನ್‌ಜಿಓ ಖಾಲ್ಸಾ ಏಡ್, ಟಿಕ್ರಿ ಗಡಿಯ ಬಳಿ ಕಿಸಾನ್ ಮಾಲ್ ಸ್ಥಾಪಿಸಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆ ಮಾಡಿದೆ. ಟೂತ್ ಪೇಸ್ಟ್/ಬ್ರಶ್‌ನಿಂದ ಹಿಡಿದು ಸೋಪು, ಎಣ್ಣೆ, ಮಫ್ಲರ್‌ಗಳವರೆಗೂ ಪ್ರತಿಯೊಂದು ದಿನನಿತ್ಯದ ಅಗತ್ಯ ವಸ್ತುಗಳನ್ನು ಈ ಮಾಲ್‌ನ ರ‍್ಯಾಕ್‌ಗಳಲ್ಲಿ ಒದಗಿಸಲಾಗಿದೆ. “ಖಾಲ್ಸಾ ಏಡ್ ಮೂಲಕ ರೈತರಿಗೆ ನಾವು ಟೋಕನ್ ವಿತರಿಸುತ್ತೇವೆ. ಇವುಗಳನ್ನು ತೋರುವ ಮೂಲಕ ಅವರು ಇಲ್ಲಿ ವಸ್ತುಗಳನ್ನು ಪಡೆದುಕೊಳ್ಳಬಹುದಾಗಿದೆ. ಪ್ರತಿನಿತ್ಯ 5000ಕ್ಕೂ ಹೆಚ್ಚು ಟೋಕನ್‌ಗಳನ್ನು ನಾವು ವಿತರಿಸುತ್ತಿದ್ದೇವೆ,” ಎಂದು ಸ್ಟೋರ್ ಮ್ಯಾನೇಜರ್ ಗುರು ಚರಣ್ ತಿಳಿಸಿದ್ದಾರೆ.