ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ವಿಶ್ವಾದ್ಯಂತ ಐ ಎಂ ಜಿ ಎಲ್ಎಲ್ ಸಿಯನ್ನ ತಮ್ಮ ಕ್ರೀಡಾ ನಿರ್ವಹಣೆಯ ಜಂಟಿ ಉದ್ಯಮದಿಂದ 52.08 ಕೋಟಿ ರೂಪಾಯಿಗೆ ಖರೀದಿ ಮಾಡಲು ಸಮ್ಮತಿ ನೀಡಿದೆ.
ದೇಶದ ಅತಿದೊಡ್ಡ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಐಎಂಜಿ ವರ್ಲ್ಡ್ ವೈಡ್ನ ಶೇಕಡಾ 50ರಷ್ಟು ಪಾಲನ್ನ 52.08 ಕೋಟಿ ರೂಪಾಯಿಗಿಂತ ಜಾಸ್ತಿ ಮೊತ್ತಕ್ಕೆ ಖರೀದಿ ಮಾಡೋದಿಲ್ಲ ಎಂದು ಹೇಳಿದೆ.
ಭಾರತದಲ್ಲಿ ಕ್ರೀಡೆ ಮತ್ತು ಮನರಂಜನೆಯನ್ನು ಅಭಿವೃದ್ಧಿಪಡಿಸಲು ರಿಲಾಯನ್ಸ್ 2010 ರಲ್ಲಿ ಅಂತರರಾಷ್ಟ್ರೀಯ ಕ್ರೀಡಾ ಮಾರುಕಟ್ಟೆ ಮತ್ತು ನಿರ್ವಹಣಾ ಕಂಪನಿಯಾದ ಐಎಂಜಿ ವರ್ಲ್ಡ್ವೈಡ್ನೊಂದಿಗೆ ಸಮಾನ ಜಂಟಿ ಉದ್ಯಮವನ್ನು ರೂಪಿಸಿತ್ತು.