ಬೆಂಗಳೂರು: ಅವನೊಬ್ಬ ಹೇಳಿದ ಎಂದು ಅವೈಜ್ಞಾನಿಕವಾಗಿ ನೈಟ್ ಕರ್ಫ್ಯೂ ಜಾರಿ ಮಾಡಿದರು. ಈಗ ಅದನ್ನು ವಾಪಸ್ ಪಡೆದಿದ್ದಾರೆ. ನನಗೆ ಸಚಿವ ಸುಧಾಕರ್ ಬಗ್ಗೆ ಚಿಂತೆಯಾಗ್ತಿಲ್ಲ. ಸಿಎಂ ಯಡಿಯೂರಪ್ಪ ಯಾಕಿಷ್ಟು ವೀಕ್ ಆಗಿದ್ದಾರೆ ಎಂಬುದೇ ಚಿಂತೆಯಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ಸುಧಾಕರ್ ಹೇಳಿದರೆಂದು ನೈಟ್ ಕರ್ಫ್ಯೂಗೆ ಸಿಎಂ ಸಹಿ ಹಾಕಿಬಿಟ್ಟರು. ಇದು ಜ್ಞಾನ ಇಲ್ಲದವರು ಮಾಡುವ ತೀರ್ಮಾನ. ನಾವು ಮಾತ್ರವಲ್ಲ, ಬಿಜೆಪಿ ಸಚಿವರು ಕೂಡ ಉಗಿದಿದ್ದಾರೆ. ಹಾಗಾಗಿ ನೈಟ್ ಕರ್ಫ್ಯೂ ವಾಪಸ್ ಪಡೆದಿದ್ದಾರೆ ಎಂದು ಗುಡುಗಿದರು.
ಸರ್ಕಾರ ಹಾಗೂ ಸಚಿವರಿಗಿಂತ ರಾಜ್ಯದ ಸಾಮಾನ್ಯ ಜನರಿಗೆ ಹೆಚ್ಚು ಕಾಮನ್ ಸೆನ್ಸ್ ಇದೆ. ಆರೋಗ್ಯ ಸಚಿವರಾಗಿರುವ ಸುಧಾಕರ್ ಗೆ ಏನು ಗೊತ್ತಿದೆ? ಎಲ್ಲಾ ನಿರ್ಧಾರಗಳನ್ನೂ ತಾವೊಬ್ಬರೇ ತೆಗೆದುಕೊಳ್ಳುತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.