ನೀವು ಯಾವುದಾದರೂ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರಾದರೆ ನಿಮಗೆ ಪಿಎಫ್ ಮಾಹಿತಿ ಇದ್ದೇ ಇರುತ್ತೆ. ನಿಮ್ಮ ಪ್ರತಿ ತಿಂಗಳ ಸಂಬಳದಲ್ಲಿ ಕಡಿತಗೊಂಡ ಹಣವನ್ನ ಈ ಪಿಎಫ್ ಖಾತೆಯಲ್ಲಿ ಸಂಗ್ರಹಿಸಿ ಇಡಲಾಗುತ್ತೆ. ಪಿಎಫ್ ಖಾತೆ ಹೊಂದಿರುವ ಪ್ರತಿಯೊಬ್ಬ ನೌಕರನ ಬಳಿಯೂ ಯುನಿವರ್ಸಲ್ ಅಕೌಂಟ್ ನಂಬರ್ ಅಂದರೆ ಯುಎಎನ್ ನಂಬರ್ ಇರುತ್ತೆ. ಈ ಯುಎಎನ್ ನಂಬರ್ ಮೂಲಕ ನೀವು ನಿಮ್ಮ ಪಿಎಫ್ ಖಾತೆಯಲ್ಲಿ ನಡೆಯುತ್ತಿರುವ ವಹಿವಾಟಿನ್ನ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ನೀವು ಕಂಪನಿ ಅಲ್ಲವೇ ಸಂಸ್ಥೆಯನ್ನ ಬದಲಾಯಿಸಿದರೂ ಸಹ ಈ ಯುಎಎನ್ ನಂಬರ್ ಮಾತ್ರ ಬದಲಾಗೋದಿಲ್ಲ.
ಎಲ್ಲಾ ಬ್ಯಾಂಕ್ ಖಾತೆಗಳಂತೆಯೇ ಯುಎಎನ್ಗೂ ನೀವು ನಿಮ್ಮ ಅಧಿಕೃತ ಮೊಬೈಲ್ ನಂಬರ್ನ್ನ ನೋಂದಾಯಿಸಬೇಕಾಗುತ್ತೆ. ನೀವು ದಾಖಲೆ ಮಾಡಿದ ಮೊಬೈಲ್ ನಂಬರ್ಗೆ ಪಿಎಫ್ ಖಾತೆಗೆ ಸಂಬಂಧಿಸಿದ ಎಲ್ಲಾ ಮೆಸೇಜ್ಗಳೂ ಬರುತ್ತವೆ. ಒಂದು ವೇಳೆ ನೀವು ನಿಮ್ಮ ಮೊಬೈಲ್ ನಂಬರ್ನ್ನ ಬದಲಾವಣೆ ಮಾಡಿದ್ರಿ ಅಂದರೆ ಯುಎಎನ್ನಲ್ಲೂ ಈ ನಂಬರ್ನ್ನ ಆದಷ್ಟು ಬೇಗ ನೋಂದಾಯಿಸೋದು ನಿಮಗೆ ಒಳ್ಳೆಯದು. ಹಾಗಾದ್ರೆ ಈ ಮೊಬೈಲ್ ನಂಬರ್ನ್ನ ಹೇಗೆ ಪಿಎಫ್ ಖಾತೆಗೆ ನೋಂದಾಯಿಸೋದು ಅಂತಾ ತಿಳಿದುಕೊಳ್ಳಲು ಮುಂದೆ ಓದಿ.
https://www.epfindia.gov.in/site_en/index.php ಲಾಗಿನ್ ಆಗಿ ನಿಮ್ಮ ಯುಎಎನ್ ನಂಬರ್ ಹಾಗೂ ಪಾಸ್ವರ್ಡ್ ಅನ್ನು ನೋಂದಾಯಿಸಿ. ಮ್ಯಾನೇಜ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಕ್ಯಾಂಟಾಕ್ಟ್ ಡಿಟೇಲ್ಸ್ ಆ್ಯಕೆಯಲ್ಲಿ ಚೇಂಜ್ ಮೊಬೈಲ್ ನಂಬರ್ ಆಯ್ಕೆಯನ್ನ ಆಯ್ದುಕೊಳ್ಳಿ. ಇಲ್ಲಿ ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನ ದಾಖಲಿಸಿ. ಹೊಸ ಮೊಬೈಲ್ ಸಂಖ್ಯೆಯನ್ನ ಖಾತ್ರಿ ಮಾಡಲು ಇನ್ನೊಮ್ಮೆ ನಿಮ್ಮ ಮೊಬೈಲ್ ನಂಬರ್ ಸಂಖ್ಯೆಯನ್ನ ಟೈಪ್ ಮಾಡಿದೆ. ಇದಾದ ಬಳಿಕ ಒಟಿಪಿಯನ್ನ ಕಳಿಸಲು ನಿಮಗೆ ಅನುಮತಿ ಕೇಳಲಾಗುತ್ತೆ. ನೀವು ಅನುಮತಿ ನೀಡಿದ ಬಳಿಕ ನೀವು ನೋಂದಾಯಿಸಿದ ಹೊಸ ಸಂಖ್ಯೆಗೆ ಒಟಿಪಿ ಬರಲಿದೆ. ಈ ಒಟಿಪಿಯನ್ನ ನಮೂದಿಸಿ ಸೇವ್ ಬಟನ್ ಕ್ಲಿಕ್ ಮಾಡಿ. ಈ ರೀತಿ ಮಾಡುವ ಮೂಲಕ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನ ಬದಲಾಯಿಸಬಹುದಾಗಿದೆ.