ಕೋವಿಡ್-19 ಕಾರಣದಿಂದಾಗಿ ಡಿಸೆಂಬರ್ 31ಕ್ಕೆ ಮುಂದೂಡಲ್ಪಟ್ಟಿದ್ದ ಆದಾಯ ತೆರಿಗೆ ರಿಟರ್ನ್ಸ್ ಪ್ರಕ್ರಿಯೆ ಪೂರೈಸಲು ತೆರಿಗೆದಾರರಿಗೆ ಇನ್ನು 7 ದಿನಗಳು ಮಾತ್ರವೇ ಉಳಿದಿದೆ.
2019-20ರ ವಿತ್ತೀಯ ವರ್ಷದ ತೆರಿಗೆ ರಿಟರ್ನ್ಸ್ಅನ್ನು ತೆರಿಗೆದಾರರು ಸಲ್ಲಿಸಬೇಕಿದೆ. https://www.incometaxindiaefiling.gov.in ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನೀವೀಗ ಸುಲಭವಾಗಿ ಐಟಿ-ರಿಟರ್ನ್ಸ್ ಸಲ್ಲಿಸಬಹುದಾಗಿದೆ.
ಈ ವೇಳೆ ನೀವು ಕೆಳಕಂಡ ಐದು ದಾಖಲೆಗಳನ್ನು ಪಕ್ಕಾ ಇಟ್ಟುಕೊಂಡಿರುವುದು ಉತ್ತಮ:
1. ಪಾನ್ ಕಾರ್ಡ್
2. ಆಧಾರ್ ಕಾರ್ಡ್ ಸಂಖ್ಯೆ
3. ವೇತನ/ಪಿಂಚಣಿ: ಉದ್ಯೋಗದಾತರಿಂದ ಫಾರಂ 16
4. ಉಳಿತಾಯ ಖಾತೆ ಹಾಗೂ ಎಫ್‌ಡಿಗಳ ಬ್ಯಾಂಕ್ ಸ್ಟೇಟ್‌ಮೆಂಟ್/ಪಾಸ್‌ಬುಕ್
5. ಫಾರಂ 26ಎಎಸ್ ಮೂಲಕ ತೆರಿಗೆ ಪಾವತಿಯ ಖಾತ್ರಿ