ನವದೆಹಲಿ: ದೇಶದ ಎಲ್ಲ 4 ಚಕ್ರದ ವಾಹನಗಳಿಗೆ 2021 ರ ಜನವರಿ 1 ರಿಂದ ಜಾರಿಗೆ ಬರುವಂತೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇದರಿಂದ ಪ್ರಯಾಣಿಕರಿಗೆ ಉಪಯೋಗವಾಗುತ್ತದೆ. ನಗದು ಪಾವತಿ, ಸಮಯ, ಇಂಧನ ಉಳಿತಾಯವಾಗಯತ್ತದೆ. ಅಲ್ಲದೇ, ಟೋಲ್ ಪ್ಲಾಜಾಗಳಲ್ಲಿ ನಿಲ್ಲುವ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.
ಜನವರಿ 1 ರಿಂದ ಹಳೆಯ ವಾಹನಗಳು ಸೇರಿದಂತೆ ಎಲ್ಲಾ 4 ಚಕ್ರದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸುವ ನಿರ್ಧಾರವನ್ನು ಹಿಂದೆಯೇ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೈಗೊಂಡಿದೆ.
ಸಚಿವಾಲಯದಿಂದ ಫಾಸ್ಟ್ಯಾಗ್ ಗಳ ಮೂಲಕ ಡಿಜಿಟಲ್ ಮತ್ತು ಐಟಿ ಆಧಾರಿತ ಶುಲ್ಕವನ್ನು ಪಾವತಿಸಲು ಅಧಿಸೂಚನೆ ಹೊರಡಿಸಲಾಗಿತ್ತು. ಜನವರಿ 1 ರಿಂದ ಹಳೆಯ ವಾಹನಗಳಲ್ಲಿಯೂ ಲಭ್ಯವಾಗುವಂತೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಸಾರಿಗೆ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಿದ ನಂತರವೇ ಫಿಟ್ನೆಸ್ ಪ್ರಮಾಣಪತ್ರದ ನವೀಕರಣ ಮಾಡಲಾಗುವುದು ಎಂದು ಹೇಳಲಾಗಿದೆ.