ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗಾಗಿ ಅತಿದೊಡ್ಡ ಶೈಕ್ಷಣಿಕ ಯೋಜನೆ ಜಾರಿಗೊಳಿಸಲಾಗಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಸ್ಕಾಲರ್ ಶಿಪ್ ನಲ್ಲಿ ಪರಿವರ್ತನೆಯ ಬದಲಾವಣೆ ತರಲು ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ.
ಕೇಂದ್ರ ಸರ್ಕಾರ ಒಟ್ಟು ಮೊತ್ತದ ಶೇಕಡ 60 ರಷ್ಟು ಭರಿಸಲಿದೆ. ಆನ್ಲೈನ್ ವೇದಿಕೆ ಮೂಲಕ ಯೋಜನೆ ಕಾರ್ಯಾಚರಿಸಲಿದೆ. ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣಕಾಸು ನೆರವು ವರ್ಗಾವಣೆ ಮಾಡಲಾಗುವುದು. ಆನ್ಲೈನ್ ಪೋರ್ಟಲ್ ಮೂಲಕ ಪರಿಶೀಲನೆ ನಡೆಯಲಿದೆ.
ಮೆಟ್ರಿಕ್ ನಂತರದ 11 ನೇ ತರಗತಿ ಮತ್ತು ಅದರ ನಂತರದ ಎಲ್ಲಾ ಕೋರ್ಸ್ ಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ದೊರೆಯಲಿದೆ. ಇದರಲ್ಲಿ ಸಂಪೂರ್ಣ ಟ್ಯೂಷನ್ ಶುಲ್ಕ, ಮಾಸಿಕ ನಿರ್ವಹಣಾ ಭತ್ಯೆ ಇತ್ಯಾದಿ ಒಳಗೊಂಡಿದೆ.
ಬಡ ಕುಟುಂಬಗಳ ಮಕ್ಕಳು ಶಾಲೆ ತೊರೆಯುವುದನ್ನು ತಪ್ಪಿಸಲು ಗಮನಹರಿಸಲಾಗಿದೆ. ಮುಂದಿನ 5 ವರ್ಷದಲ್ಲಿ 4 ಕೋಟಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರಯೋಜನ ಸಿಗಲಿದೆ. ಶಿಕ್ಷಣದಲ್ಲಿ ಹೂಡಿಕೆ ಮತ್ತು ಕೌಶಲ್ಯ ಜೀವನೋಪಾಯವನ್ನು ಖಚಿತಪಡಿಸುತ್ತದೆ. ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುತ್ತದೆ. ಕೇಂದ್ರ ಸರ್ಕಾರದಿಂದ 35,534 ಕೋಟಿ ರೂಪಾಯಿ ಹಂಚಿಕೆ ಮಾಡಲಿದ್ದು, ಶೇಕಡ 60 ರಷ್ಟು ವೆಚ್ಚ ಭರಿಸುತ್ತದೆ. ಉಳಿದ ಮೊತ್ತವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಭರಿಸಲಿವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
https://www.facebook.com/MPPratapSimha/posts/2813035412290132