ಟೆಲಿಕಾಂ ರೆಗ್ಯೂಲಾರಿಟಿ ಅಥಾರಿಟಿ ಆಫ್ ಇಂಡಿಯಾ ಬಿಡುಗಡೆ ಮಾಡಿದ ಚಂದಾದಾರಿಕೆ ವರದಿ ಪ್ರಕಾರ, ಏರ್ಟೆಲ್ ಅಕ್ಟೋಬರ್ನಲ್ಲಿ 3.67 ದಕ್ಷಲಕ್ಷಕ್ಕೂ ಹೆಚ್ಚಿನ ಚಂದಾದಾರರನ್ನ ನೋಂದಾವಣಿ ಮಾಡುವ ಮೂಲಕ ರಿಲಯನ್ಸ್ ಜಿಯೋವನ್ನ ಹಿಂದಿಕ್ಕಿದೆ.
ಏರ್ಟೆಲ್ ಜಿಯೋಗಿಂತ 1.45 ಮಿಲಿಯನ್ ಚಂದಾದಾರರನ್ನ ಹೆಚ್ಚುವರಿಯಾಗಿ ನೋಂದಾವಣಿ ಮಾಡಿದೆ.
ಟ್ರಾಯ್ ಒದಗಿಸಿದ ಇತ್ತೀಚಿನ ಮಾಹಿತಿ ಪ್ರಕಾರ ಏರ್ಟೆಲ್ನ ವೈರ್ಲೆಸ್ ಚಂದಾದಾರರ ಸಂಖ್ಯೆ ಅಕ್ಟೋಬರ್ನಲ್ಲಿ 330.28 ದಶಲಕ್ಷ ತಲುಪಿದೆ. ಇದು ಸಪ್ಟೆಂಬರ್ ತಿಂಗಳಿಗೆ ಹೋಲಿಕೆ ಮಾಡಿದ್ರೆ 326.66 ದಶಲಕ್ಷಕ್ಕಿಂತ ಹೆಚ್ಚು. ಅಂದರೆ ಒಂದು ತಿಂಗಳಲ್ಲಿ ಏರ್ಟೆಲ್ 3.67 ಮಿಲಿಯನ್ ಹೊಸ ಗ್ರಾಹಕರನ್ನ ಗಳಿಸುವಲ್ಲಿ ಯಶಸ್ವಿಯಾಗಿದೆ.
ವೋಡಾಫೋನ್ ಇಂಡಿಯಾ ಅಕ್ಟೋಬರ್ನಲ್ಲಿ 2.65 ಮಿಲಿಯನ್ ಚಂದಾದಾರರ ಕುಸಿತ ಕಂಡಿದೆ. ಅಂತೆಯೇ ಬಿಎಸ್ಎನ್ಎಲ್ ಒಂದೇ ತಿಂಗಳಲ್ಲಿ 10,215 ವೈರ್ಲೆಸ್ ಚಂದಾದಾರರ ಕುಸಿತ ಕಂಡಿದೆ.