ಮರುಬಳಕೆ ಮಾಡಲಾಗದಂತಹ ಸರ್ಜಿಕಲ್ ಮಾಸ್ಕ್ಗಳನ್ನ ಹಾಕಿಕೊಂಡು ನಾವು ಮಾತನಾಡಿದ್ರೂ ಸಹ ಕೇಳುಗರಿಗೆ ನಮ್ಮ ಧ್ವನಿ ಸ್ಪಷ್ಟವಾಗಿ ತಲಪುತ್ತೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಈ ಅಧ್ಯಯನಕ್ಕೆ ಅನೇಕ ಮಾಸ್ಕ್ಗಳನ್ನ ಒಳಪಡಿಸಲಾಗಿತ್ತು.
ಅಮೆರಿಕದ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದು ಈ ಫಲಿತಾಂಶವನ್ನ ಬಹಿರಂಗಪಡಿಸಿದೆ. ಸಮೀಕ್ಷೆಯಲ್ಲಿ ಸರ್ಜಿಕಲ್ ಮಾಸ್ಕ್, ಮರುಬಳಕೆ ಮಾಡಲಾಗದ ಸರ್ಜಿಕಲ್ ಮಾಸ್ಕ್, ಬಟ್ಟೆಯ ಮಾಸ್ಕ್ ಸೇರಿದಂತೆ ಸಾಕಷ್ಟು ಮಾಸ್ಕ್ಗಳನ್ನ ಬಳಕೆ ಮಾಡಲಾಗಿತ್ತು.
ಮರುಬಳಕೆ ಮಾಡಲಾಗದ ಸರ್ಜಿಕಲ್ ಮಾಸ್ಕ್ಗಳು ಪ್ಲಾಸ್ಟಿಕ್ ಲೇಯರ್ನಲ್ಲಿ ರಂಧ್ರಗಳನ್ನ ಹೊಂದಿರುತ್ತೆ. ಆದರೆ ಬಟ್ಟೆಯ ಮಾಸ್ಕ್ಗಳಲ್ಲಿ ಸ್ಪಷ್ಟವಾದ ರಂಧ್ರಗಳು ಇರೋದಿಲ್ಲ.
ಈ ಅಧ್ಯಯನ ಮಾಡೋಕೆ ಸಂಶೋಧಕರು ವಿಶೇಷವಾದ ಮನುಷ್ಯನ ತಲೆ ರೀತಿಯ ಧ್ವನಿವರ್ಧಕವನ್ನ ಬಳಕೆ ಮಾಡಿದ್ದರು.