alex Certify BIG NEWS: ಹೊಸ ವರ್ಷದಿಂದ ‘ಫೇಸ್​ಬುಕ್​’ನಲ್ಲಾಗಲಿದೆ ಈ ಮಹತ್ವದ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೊಸ ವರ್ಷದಿಂದ ‘ಫೇಸ್​ಬುಕ್​’ನಲ್ಲಾಗಲಿದೆ ಈ ಮಹತ್ವದ ಬದಲಾವಣೆ

ಸೋಶಿಯಲ್ ಮೀಡಿಯಾ ದೈತ್ಯ ಫೇಸ್​​ಬುಕ್​​ ಬಳಕೆದಾರರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷದಿಂದ ಅನೇಕ ಮುಖ್ಯ ಬದಲಾವಣೆಗಳನ್ನ ತರಲಿದೆ ಎಂದು ಹೇಳಿದೆ. ಫೇಸ್​ಬುಕ್​​ಗೆ ಲಾಗಿನ್​ ಆಗುವ ಮುನ್ನ ಬಳಕೆದಾರರು ತಮ್ಮ ಗುರುತನ್ನ ದೃಢೀಕರಿಸುವಂತವ ವ್ಯವಸ್ಥೆಯನ್ನ ಫೇಸ್​ಬುಕ್​ ತರಲಿದೆ.

ಮಾರ್ಕ್​ ಜುಕರ್​ ಬರ್ಗ್​ ಒಡೆತನದ ಫೇಸ್​ಬುಕ್​ ಸಂಸ್ಥೆ ಬಳಕೆದಾರರು ಪ್ರತಿ ಬಾರಿ ಕಂಪ್ಯೂಟರ್​ನಲ್ಲಿ ಲಾಗಿನ್​​ ಆಗುವ ಮೊದಲು ಹಾರ್ಡ್​ ಸೆಕ್ಯೂರಿಟಿ ಕೀಯನ್ನ ಬಳಕೆ ಮಾಡುವಂತಹ ಆಯ್ಕೆಯನ್ನ ನೀಡಲಿದೆ. ಈ ಹಾರ್ಡ್​ವೇರ್​ ಸೆಕ್ಯೂರಿಟಿ ಕೀಯನ್ನ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿ ಮಾಡಬಹುದು ಹಾಗೂ ಫೇಸ್​ಬುಕ್​​ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ವಿಶ್ವದ ಅತೀ ದೊಡ್ಡ ಸಾಮಾಜಿಕ ನೆಟ್​ವರ್ಕ್​ ಆದ ಫೇಸ್​ಬುಕ್​ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಅಂದರೆ ಉನ್ನತ ಮಟ್ಟದ ಖಾತೆಗಳಿಗೆ ಇನ್ಮುಂದೆ ಬೇರೆ ರೀತಿಯ ಭದ್ರತಾ ವ್ಯವಸ್ಥೆ ಇರಲಿದೆ. ಪ್ರಸ್ತುತ ಅಮೆರಿಕದಲ್ಲಿ ಈ ವ್ಯವಸ್ಥೆ ಲಭ್ಯವಿದೆ. ಹ್ಯಾಕರ್ಸ್​ಗಳ ಕಾಟದಿಂದ ತಪ್ಪಿಸುವ ಸಲುವಾಗಿ ರಾಜಕಾರಣಿಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಚುನಾವಣಾ ಸಿಬ್ಬಂದಿಗೆ ಹೆಚ್ಚುವರಿ ನಿಬಂಧನೆಗಳನ್ನ ವಿಧಿಸಲಾಗುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...