ತ್ವರಿತ ಹಾಗೂ ಕಡಿಮೆ ದಾಖಲೆಗಳಿಗೆ ಸಾಲ ನೀಡುವ ಅನಧಿಕೃತ ಡಿಜಿಟಲ್ ಸಾಲ ಫ್ಲಾಟ್ ಫಾರಂ ಹಾಗೂ ಮೊಬೈಲ್ ಅಪ್ಲಿಕೇಶನ್ಗಳಿಗೆ ವ್ಯಕ್ತಿಗಳು, ಸಣ್ಣ ಉದ್ದಿಮೆದಾರರು ಬಲಿಯಾಗದಂತೆ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ.
ತ್ವರಿತ ಸಾಲ ನೀಡುವ ಅನಧಿಕೃತ ಫ್ಲಾಟ್ಫಾರಂಗಳು ಹೆಚ್ಚಿನ ಬಡ್ಡಿದರ ಹಾಗೂ ಶುಲ್ಕಗಳನ್ನ ವಿಧಿಸುತ್ತವೆ. ಅಲ್ಲದೇ ಸಾಲಗಾರರ ಮೊಬೈಲ್ ಫೋನ್ ಡೇಟಾ ಪ್ರವೇಶಿಸಲು ಒಪ್ಪಿಗೆ ಪಡೆಯುವ ಮೂಲಕ ಗೌಪ್ಯತೆ ಒಪ್ಪಂದಗಳನ್ನ ದುರುಪಯೋಗ ಪಡಿಸಿಕೊಳ್ಳುತ್ತವೆ.
ಸಾರ್ವಜನಿಕರು ಇಂತಹ ಅನಧಿಕೃತ ಚಟುವಟಿಕೆಗಳಿಗೆ ಬಲಿಯಾಗಬಾರದು. ಆನ್ಲೈನ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲ ನೀಡುವ ಕಂಪನಿಗಳ ವಿರುದ್ಧ ಎಚ್ಚರಿಕೆಯಿಂದಿರುವಂತೆ ಆರ್ಬಿಐ ಕಿವಿಮಾತನ್ನ ಹೇಳಿದೆ.