ಬೆಂಗಳೂರು: 2021 ಹೊಸ ವರ್ಷಕ್ಕೆ ಸಾರ್ವಜನಿಕವಾಗಿ ಪಾರ್ಟಿಗೆ ನಿಷೇಧ ಹೇರಲಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕವಾಗಿ ಹೊಸ ವರ್ಷದ ಪಾರ್ಟಿಗಳಿಗೆ ನಿಷೇಧವಿರುತ್ತದೆ.
ಕ್ಲಬ್, ಪಬ್, ರೆಸ್ಟೋರೆಂಟ್ ಗಳಲ್ಲಿ ನ್ಯೂ ಇಯರ್ ಪಾರ್ಟಿ, ದೈಹಿಕ ಅಂತರವಿಲ್ಲದೆ ಒಟ್ಟುಗೂಡುವಿಕೆಗೆ ನಿಷೇಧ ಹೇರಲಾಗಿದೆ. ಸಾರ್ವಜನಿಕವಾಗಿ ವಿಶೇಷ ಪಾರ್ಟಿ ನಡೆಸುವುದಕ್ಕೂ ನಿಷೇಧವಿದೆ. ಆದರೆ, ಯಥಾಸ್ಥಿತಿಯಲ್ಲಿ ಕ್ಲಬ್, ಪಬ್, ರೆಸ್ಟೋರೆಂಟ್ ತೆರೆಯಬಹುದು ಎನ್ನಲಾಗಿದೆ.
ಸಾರ್ವಜನಿಕ ಸ್ಥಳ, ಮುಖ್ಯರಸ್ತೆಗಳಲ್ಲಿ ಸೆಲೆಬ್ರೇಷನ್ ಬ್ಯಾನ್ ಮಾಡಲಾಗಿದೆ. ದೈಹಿಕ ಅಂತರ ಇಲ್ಲದೇ ಜನ ಒಟ್ಟಿಗೆ ಸೇರುವಂತಿಲ್ಲ. ಜನ ಸೇರುವಿಕೆ ಮತ್ತು ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿದೆ. ನೈಟ್ ಕರ್ಫ್ಯೂ ನಿಂದಾಗಿ ಸಿನಿಮಾಗಳ ಸೆಕೆಂಡ್ ಶೋ ರದ್ದು ಮಾಡಲಾಗಿದೆ. ರಾತ್ರಿ 9 ಗಂಟೆ ನಂತರ ಶುರುವಾಗುವ ಎಲ್ಲಾ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ಸಂಜೆ 7 ಗಂಟೆಯಿಂದ ರಾತ್ರಿ 9:30 ರವರೆಗಿನ ಶೋಗಳಿಗೆ ಅವಕಾಶ ಇರುತ್ತದೆ ಎಂದು ಹೇಳಲಾಗಿದೆ.