alex Certify 3 ವರ್ಷಗಳಿಂದ ಈ ಪರಿಸರ ಪ್ರೇಮಿ ಪಾವತಿ ಮಾಡಿಲ್ಲ ನೀರು​, ವಿದ್ಯುತ್​ ಬಿಲ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ವರ್ಷಗಳಿಂದ ಈ ಪರಿಸರ ಪ್ರೇಮಿ ಪಾವತಿ ಮಾಡಿಲ್ಲ ನೀರು​, ವಿದ್ಯುತ್​ ಬಿಲ್​…!

ವಿದ್ಯುತ್​ ಸೌಕರ್ಯವೇ ಇಲ್ಲದ ಮನೆಯಲ್ಲಿ ಜೀವನ ಮಾಡೋಕೆ ನಿಮ್ಮಿಂದ ಸಾಧ್ಯವಿದೆಯೇ..? ಈ ಪ್ರಶ್ನೆಗೆ ಹೌದು ಎಂಬ ಉತ್ತರವನ್ನ ಸಾಬೀತು ಮಾಡಿ ತೋರಿಸಿದ್ದಾರೆ ಪರಿಸರವಾದಿ ಸೌಮ್ಯ ಪ್ರಸಾದ್​.

40 ವರ್ಷದ ಸೌಮ್ಯ ಪ್ರಸಾದ್​ ಕಳೆದ ಮೂರು ವರ್ಷಗಳಿಂದ ವಿದ್ಯುತ್​ ಬಿಲ್​ ಅಥವಾ ನೀರಿನ್​ ಬಿಲ್​ಗೆ ಒಂದು ಪೈಸೆಯನ್ನೂ ಪಾವತಿ ಮಾಡಿಲ್ಲ.

ಹಾಗಂತ ಸೌಮ್ಯ ಪ್ರಸಾದ್​ ಅನ್ಯ ಗ್ರಹದ ಜೀವಿಯಂತೆ ಬದುಕುತ್ತಿದ್ದಾರಾ ಎಂದು ಭಾವಿಸಬೇಡಿ. ಇವರು ಕೂಡ ನಮ್ಮಂತೆಯೇ ಸಾಮಾಜಿಕ ಜೀವನವನ್ನ ಸಾಗಿಸುತ್ತಿದ್ದಾರೆ. ಕಾರು ಸೇರಿದಂತೆ ಆಧುನಿಕ ಜೀವನದ ಎಲ್ಲಾ ಸೌಕರ್ಯಗಳನ್ನೂ ಇವರು ಎಂಜಾಯ್​ ಮಾಡ್ತಾರೆ. ಆದರೆ ಈ ಐಷಾರಾಮಿ ಜೀವನದಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿ ಉಂಟಾಗದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.

ಸೌಮ್ಯ ಪ್ರಸಾದ್​ ಕಳೆದ ಅನೇಕ ವರ್ಷಗಳಿಂದ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನ ರೂಢಿಸಿಕೊಂಡಿದ್ದಾರೆ. ಮನೆಯಲ್ಲಿ ವಿದ್ಯುತ್​ ಪೂರೈಕೆ ಬದಲು ಸೌರಶಕ್ತಿಯನ್ನ ಬಳಕೆ ಮಾಡಲಾಗುತ್ತಿದೆ.

ಮನೆ ನೀರಿನ ಪೂರೈಕೆಗೆ ಮಳೆ ನೀರು ಕೊಯ್ಲು ಪದ್ಧತಿಯನ್ನ ಬಳಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಪರಿಸರ ರಕ್ಷಣೆ ಆಗೋದ್ರ ಜೊತೆ ಜೊತೆಗೆ ವಿದ್ಯುತ್​ ಬಿಲ್​ ಹಾಗೂ ನೀರಿನ ಬಿಲ್​​ನಲ್ಲಿ ಸಾವಿರಾರು ರೂಪಾಯಿ ಉಳಿಕೆ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...