alex Certify ಡ್ರಂಕ್​ & ಡ್ರೈವ್​ ಪರೀಕ್ಷೆಗೆ ಹೊಸ ಮಾರ್ಗ ಹುಡುಕಿದ ಪೊಲೀಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಂಕ್​ & ಡ್ರೈವ್​ ಪರೀಕ್ಷೆಗೆ ಹೊಸ ಮಾರ್ಗ ಹುಡುಕಿದ ಪೊಲೀಸ್​..!

ಹೊಸ ವರ್ಷ,​ ಹಬ್ಬಕ್ಕೆ ಚೆನ್ನಾಗಿ ಎಣ್ಣೆ ಹೊಡೆದು ಬೈಕ್,   ​ಕಾರಲ್ಲಿ ರೌಂಡ್ಸ್ ಹಾಕೋ ಪ್ಲಾನ್​ ಇದೆಯಾ..? ಹಾಗಾದ್ರೆ ನೈಟ್​ ಕರ್ಫ್ಯೂ ಆದೇಶ ಉಲ್ಲಂಘನೆ ಜೊತೆಗೆ ಡ್ರಂಕ್​ & ಡ್ರೈವ್ ಕೇಸ್​ ನಿಮ್ಮ ಮೇಲೆ ಬೀಳೋದು ಪಕ್ಕಾ.

ಕೊರೊನಾದಿಂದಾಗಿ ಬ್ರೀತ್​ ಅನಲೈಸರ್​ ಬಳಕೆ ಕಡಿಮೆ ಮಾಡಿರುವ ದೇಶದ ವಿವಿಧ ರಾಜ್ಯಗಳ ಪೊಲೀಸರು ಡ್ರಂಕ್​ & ಡ್ರೈವ್​ ಪತ್ತೆಗೆ ಹೊಸ ಮಾರ್ಗಗಳನ್ನ ಕಂಡು ಹಿಡಿದಿದ್ದಾರೆ.

ಪಶ್ಚಿಮ ಬಂಗಾಳದ ಕೊಲ್ಕತ್ತಾ ಪೊಲೀಸರು ಪಾನಮತ್ತರಾಗಿದ್ದಾರೆ ಎಂಬ ಅನುಮಾನ ಬಂದರೆ ಬೆರಳು ಲೆಕ್ಕ ಹಾಕುವಂತೆ ಇಲ್ಲವೇ ನೇರವಾಗಿ ನಡೆಯುವಂತೆ ಹೇಳುತ್ತಾರೆ. ಇವೆರಡರಲ್ಲಿ ಒಂದು ಪರೀಕ್ಷೆಯಲ್ಲಿ ನೀವು ಫೇಲ್​ ಆದರೆ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮದ್ಯಪಾನ ಸೇವನೆ ಪರೀಕ್ಷೆ ಮಾಡುತ್ತಾರೆ.

ಗುಜರಾತ್​ನಲ್ಲಿ ಪೊಲೀಸರು ನಿಮ್ಮ ಕಣ್ಣಿನ ಬಣ್ಣವನ್ನ ನೋಡಿ ನೀವು ಎಣ್ಣೆ ಹೊಡೆದಿದ್ದೀರಾ ಇಲ್ಲವಾ ಅನ್ನೋದನ್ನ ನಿರ್ಧರಿಸುತ್ತಾರಂತೆ. ಕಣ್ಣು ಕೆಂಪಗಾಗಿದ್ದು ಕಂಡು ಬಂದರೆ ಅಂತವರನ್ನ ಡ್ರಂಕ್​ & ಡ್ರೈವ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರ ಜೊತೆಯಲ್ಲಿ ಉಸಿರಾಡುವಂತೆ ಹೇಳುವ ಮೂಲಕವೂ ಮದ್ಯದ ವಾಸನೆಯನ್ನ ಪತ್ತೆ ಹಚ್ಚಲಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...