ಹಾಳಾದ ಟೈರ್ನಿಂದ ಸಿದ್ಧವಾಗುತ್ತೆ ಸುಂದರ ಪಾದರಕ್ಷೆ..! 23-12-2020 4:43PM IST / No Comments / Posted In: Business, Latest News ಪರಿಸರ ಮಾಲಿನ್ಯ ಮಿತಿಮೀರುತ್ತಿರುವ ಈ ಸಂದರ್ಭದಲ್ಲಿ ತ್ಯಾಜ್ಯಗಳನ್ನ ಸಮಪರ್ಕವಾಗಿ ಬಳಕೆ ಮಾಡಿಕೊಳ್ಳೋದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಹಾಳಾದ ಟೈರ್ಗಳಿಂದ ತಯಾರಿಸಲಾಗುವ ಪಾದರಕ್ಷೆಗಳ ನಿರ್ಮಾಣ ಮಾಡುವ ಉದ್ಯಮಕ್ಕೆ ಪುಣೆ ಮೂಲದ ಉದ್ಯಮಿ ಪೂಜಾ ಬಾದಾಮಿಕರ್ ಕೊಡುಗೆ ನೀಡುತ್ತಾ ಬಂದಿದ್ದಾರೆ. ಈ ಕೊಡುಗೆ ಮೂಲಕ ಪರಿಸರ ಕಾಳಜಿ ಬಗ್ಗೆ ಜಾಗೃತಿ ಮೂಡಿಸೋದು ಬಾದಾಮಿಕರ್ ಉದ್ದೇಶವಾಗಿದೆ. ಸ್ನಾತಕೋತ್ತರ ಪದವೀಧರೆಯಾಗಿರುವ ಪೂಜಾ ಬಾದಾಮಿಕರ್, ಕಳೆದ ಎರಡು ವರ್ಷಗಳಿಂದ ಹಾಳಾದ ಟೈರ್ಗಳಿಂದ ಸುಂದರವಾದ ಪಾದರಕ್ಷೆಗಳನ್ನ ತಯಾರಿಸುವ ಉದ್ಯಮಕ್ಕೆ ಪುಷ್ಠಿ ನೀಡುತ್ತಾ ಬಂದಿದ್ದಾರೆ. ಇದರಿಂದ ತ್ಯಾಜ್ಯದ ಪ್ರಮಾಣ ಕಡಿಮೆ ಆಗುತ್ತೆ ಅಂತಾರೆ ಪೂಜಾ ಬಾದಾಮಿಕರ್. ಈ ವಿಚಾರವಾಗಿ ಮಾತನಾಡಿದ ಪೂಜಾ ಬಾದಾಮಿಕರ್, ಸಂಪೂರ್ಣ ವಿಶ್ವದಲ್ಲಿ ವರ್ಷಕ್ಕೆ ಒಂದು ಬಿಲಿಯನ್ ಟೈರ್ಗಳು ತ್ಯಾಜ್ಯವಾಗಿ ಮಾರ್ಪಾಡಾಗುತ್ತೆ. ಹೀಗಾಗಿ ನಾನು ಸ್ಥಳೀಯ ಚಮ್ಮಾರರನ್ನ ಒಂದುಗೂಡಿಸಿ ಅವರ ಸಹಾಯದಿಂದ ಪರಿಸರ ರಕ್ಷಣೆಗೆ ಸಣ್ಣ ಕೊಡುಗೆ ನೀಡುತ್ತಿದ್ದೇನೆ ಎಂದು ಹೇಳಿದ್ರು. Maharashtra: Pooja Badamikar, a Pune based entrepreneur upcycles scrap tyres to make footwear. She says, "One billion scrap tyres are discarded annually in the world. I started working with help of local cobblers & made two prototypes. That's how the journey began." (22.12.2020) pic.twitter.com/ffWn6vSZPS — ANI (@ANI) December 22, 2020