ಸೋಮಾರಿ ವ್ಯಕ್ತಿಗಳು ವಿಶ್ವದ ಯಾವುದೇ ಮೂಲೆಗೆ ಹೋದರೂ ತಮ್ಮ ಸೋಮಾರಿತನ ಬುದ್ಧಿಯನ್ನ ಬಿಡೋದಿಲ್ಲ. ಈ ಮಾತಿಗೆ ಉತ್ತಮ ಉದಾಹರಣೆ ಎಂದರೆ ಆಸ್ಟ್ರೇಲಿಯಾದ ಈ ಜೋಡಿ.
ಫ್ಲೋಟಿಂಗ್ ಬೋರ್ಡ್ನಲ್ಲಿ ಯುವತಿ ಅಲೆಗಳ ನಡುವೆ ಎಂಜಾಯ್ ಮಾಡುತ್ತಿದ್ದರೆ ಆಕೆಯ ಗೆಳೆಯ ಮಾತ್ರ ಅದೇ ಫ್ಲೋಟಿಂಗ್ ಬೋರ್ಡ್ನಲ್ಲಿ ಬೋರಲು ಮಲಗಿದ್ದಾನೆ.
ಸಮುದ್ರದ ಅಲೆಗಳು ಆತನ ಮುಖಕ್ಕೆ ಬಡಿಯುತ್ತಿದ್ದರೂ ಕ್ಯಾರೇ ಎನ್ನದ ವ್ಯಕ್ತಿ ಫ್ಲೋಟಿಂಗ್ ಬೋರ್ಡ್ ಮೇಲೆ ಬೋರಲು ಮಲಗಿದ್ದಾನೆ. ಈ ಸೋಮಾರಿ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
https://www.facebook.com/TheBellTowerTimes/videos/774979396429941/?t=0