ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗಂತೂ ಚಳಿ ಹೆಚ್ಚಾಗುತ್ತಲೇ ಇದೆ. ಮನೆಯಿಂದ ಹೊರ ಬರಲು ಸಾಧ್ಯವೇ ಆಗದಷ್ಟು ಕೊರೆಯುವ ಚಳಿ ಬೆಂಗಳೂರಿನಲ್ಲಿ ಇದೆ. ಕಳೆದ ವರ್ಷಕ್ಕಿಂತ ಈ ವರ್ಷ ಚಳಿಯ ಪ್ರಮಾಣ ಹೆಚ್ಚಾಗಿದೆ. ಸಂಜೆ ವೇಳೆಯಲ್ಲಿ ಬೀಸುವ ತಣ್ಣನೆಯ ಗಾಳಿ ಮತ್ತಷ್ಟು ಚಳಿ ಹೆಚ್ಚಾಗೋದಿಕ್ಕೆ ಕಾರಣವಾಗಿದೆ.
ಹೌದು, ಬೆಂಗಳೂರಿನಲ್ಲಿ ಬೆಳಗಿನ ಜಾವದಲ್ಲಿ ಮಂಜು ವಾತಾವರಣ ಇದೆ. ಮೊದಲೆಲ್ಲಾ ಇಷ್ಟು ಮಂಜು ಬೀಳುತ್ತಿರಲಿಲ್ಲ. ಆದರೆ ಈ ವರ್ಷ ಮಂಜು ಬೀಳೋದ್ರ ಜೊತೆಗೆ ಸಂಜೆ ಸಮಯದಲ್ಲೂ ಚಳಿ ಹೆಚ್ಚಾಗುತ್ತಿದೆ. ಈ ಬಾರಿ ಲ್ಯಾಬಿನೋ ಕಂಡೀಷನ್ ಹಾಗೂ ಫೆಸಿಫಿಕ್ ಮಹಾಸಾಗರ ಮೇಲ್ಮೈ ನೀರು ತಂಪಾಗುತ್ತಿರೋದು ಚಳಿ ಹೆಚ್ಚಾಗುವುದಕ್ಕೆ ಕಾರಣ ಎನ್ನುತ್ತಿದೆ ಹವಾಮಾನ ಇಲಾಖೆ.
ಇನ್ನು ಈ ಚಳಿಯ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂಕ್ರಾಂತಿ ವೇಳೆಗೆ ಥರಗುಟ್ಟಿಸುವ ಚಳಿ ಅಂದರೆ ಜನವರಿ ಮೊದಲು ಹಾಗೂ ಎರಡನೇ ವಾರದಲ್ಲಿ ಕನಿಷ್ಟ 10 ಡಿಗ್ರಿ ತಾಪಮಾನ ದಾಖಲಾಗಬಹುದು ಎಂದು ಊಹಿಸಲಾಗಿದೆ. ಒಟ್ನಲ್ಲಿ ಮುಂದಿನ ದಿನಗಳಲ್ಲಿ ಚಳಿ ಹೆಚ್ಚಾಗೋದ್ರಿಂದ ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದರೆ ಒಳ್ಳೆಯದು.