ಕೋವಿಡ್-19 ಕಾಟದಿಂದಾಗ ಅನೇಕ ಜೋಡಿಗಳು ತಮ್ಮ ಮದುವೆಯನ್ನು ಪೋಸ್ಟ್‌ಪೋನ್ ಮಾಡುವ ಅಥವಾ ಸೀಮಿತ ಅತಿಥಿಗಳ ಸಮ್ಮುಖದಲ್ಲ ಮಾಡಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ. ಆದರೆ ಮಲೇಷ್ಯಾದ ಜೋಡಿಯೊಂದು ಕೋವಿಡ್-19 ನಿರ್ಬಂಧಗಳ ನಡುವೆಯೇ ತಮ್ಮ ಮದುವೆ ವೇಳೆ ಹತ್ತು ಸಾವಿರ ಮಂದಿಗೆ ಆತಿಥ್ಯ ಕೊಡಲು ಸಫಲರಾಗಿದ್ದಾರೆ.
ಇಲ್ಲಿನ ಪ್ರಭಾವಿ ರಾಜಕಾರಣಿಯೊಬ್ಬರ ಪುತ್ರನಾದ ತೆಂಗ್ಕು ಮುಹಮ್ಮದ್ ಹಫೀಝ್ ಹಾಗೂ ಮದುಮಗಳು ಓಸಿಯಾನೇ ಅಲಾಗಿಯಾ ಡ್ರೈವ್-ಥ್ರೂ ಕಾರ್ಯಕ್ರಮದ ಮೂಲಕ ತಮ್ಮ ಮದುವೆಗೆ ಇಷ್ಟು ಮಂದಿಯನ್ನು ಆಹ್ವಾನಿಸಲು ಸಫಲರಾಗಿದ್ದಾರೆ. ಕ್ವಾಲಾಲಂಪುರದ ಬಳಿ ಇರುವ ಪುತ್ರಜಯ ಎಂಬಲ್ಲಿ ಈ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು.
ಸರ್ಕಾರೀ ಕಟ್ಟಡವೊಂದರ ಎದುರು ಕುಳಿತುಕೊಂಡ ಈ ದಂಪತಿಗೆ ವಿಶ್ ಮಾಡಲು ಅತಿಥಿಗಳು ತಮ್ಮ ಕಾರುಗಳಲ್ಲಿ ಒಬ್ಬೊಬ್ಬರಾಗಿ ಬರತೊಡಗಿದ್ದಾರೆ. ಕಾರಿನ ಕಿಟಕಿ ಒಳಗಿನಿಂದಲೇ ನವ ವಿವಾಹಿತರಿಗೆ ವಿಶ್ ಮಾಡಿದ್ದಾರೆ ಅತಿಥಿಗಳು.
ಇದೇ ವೇಳೆ ಹತ್ತಿರದ ಟೆಂಟ್ ಒಂದರಲ್ಲಿ ಪ್ರೀ ಪ್ಯಾಕೇಜ್ ಮಾಡಲಾದ ಆಹಾರದ ಪೊಟ್ಟಣಗಳ ಮೂಲಕ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು.
https://www.facebook.com/officialkunan/posts/4140180619344029