ಗೆಳತಿ ನಿದ್ದೆಯಲ್ಲಿ ಕನವರಿಸುತ್ತಿದ್ದ ವೇಳೆ ಈತ ಮಾಡಿದ್ದೇನು ಗೊತ್ತಾ…? 23-12-2020 7:30AM IST / No Comments / Posted In: Latest News, International ಬ್ರಿಟನ್ ಮೂಲದ ವ್ಯಕ್ತಿ ತನ್ನ ಗೆಳತಿ ನಿದ್ರೆಯಲ್ಲಿ ಕನವರಿಸುತ್ತಿದ್ದ ಮಾತುಗಳನ್ನ ನೋಟ್ ಮಾಡಿ ಬಳಿಕ ಇದನ್ನ ಭಾರತೀಯ ಮೂಲದ ಕೆನಡಾ ಕವಯಿತ್ರಿ ರೂಪಿ ಕೌರ್ ಮಾದರಿಯ ಕವನಗಳನ್ನ ರಚಿಸುವ ಮೂಲಕ ನೆಟ್ಟಿಗರು ಆಶ್ಚರ್ಯ ಚಕಿತರಾಗುವಂತೆ ಮಾಡಿದ್ದಾರೆ . ಹ್ಯಾರಿ ಮಿಚೆಲ್ ತಮ್ಮ ಗೆಳತಿ ನಿದ್ರೆಯಲ್ಲಿ ಮಾತನಾಡೋದನ್ನ ಗಮನಿಸಿದ್ದರು. ಆಕೆ ನಿದ್ರೆಯಲ್ಲಿ ಹಡಗು, ಏಡಿ ಹೀಗೆ ನಾನಾ ವಿಚಾರಗಳ ಬಗ್ಗೆ ಕನವರಿಸುತ್ತಿದ್ದರು. ಆಕೆಯ ಮಾತುಗಳನ್ನೆಲ್ಲ ನೋಟ್ ಮಾಡಿಕೊಂಡ ಹ್ಯಾರಿ ರೂಪಿ ಕೌರ್ರಂತೆಯೇ ಒಂದೊಂದು ಚಿತ್ರಗಳನ್ನ ಬಿಡಿಸಿ ಕವಿತೆ ಬರೆದಿದ್ದಾರೆ. ಹ್ಯಾರಿಯ ಈ ಪೋಸ್ಟ್ ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳನ್ನ ಪಡೆದುಕೊಂಡಿದೆ. my girlfriend talks in her sleep. i've noted them down for weeks, and turned her dreams into rupi kaur poems. pic.twitter.com/Pv3dsflgXQ — Harry Mitchell (@harrywmitchell) December 19, 2020