ಬ್ರಿಟನ್ನಲ್ಲಿ ಕಂಡು ಬಂದಿರುವ ರೂಪಾಂತರಗೊಂಡ ಕೊರೊನಾ ವೈರಸ್ ಜಗತ್ತನ್ನೇ ಭಯಭೀತರಾಗುವಂತೆ ಮಾಡಿದೆ. ಇನ್ನೇನು ಲಸಿಕೆ ಸಿಗ್ತು ಅಂತಾ ನಿಟ್ಟುಸಿರು ಬಿಡೋವಷ್ಟರಲ್ಲಿ ಇದೀಗ ಈ ಹೊಸ ಆಘಾತ ಎದುರಾಗಿದ್ದು ಜನತೆ ಮತ್ತೆ ಚಿಂತೆಯಲ್ಲಿದ್ದಾರೆ.
ಆದರೆ ಈ ಹೊಸ ರೂಪದ ವೈರಸ್ ವಿರುದ್ಧವೂ ಕೊರೊನಾ ಲಸಿಕೆ ಪರಿಣಾಮಕಾರಿಯಾಗಿದೆ ಅಂತಾ ಕೌನ್ಸಿಲ್ ಫಾರ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ ಡಿಜಿ ಶೇಖರ್ ಮಾಂಡೆ ಹೇಳಿದ್ದಾರೆ.
ಕೊರೊನಾ ವೈರಸ್ ರೂಪಾಂತರದಿಂದ ಹರಡುವಿಕೆ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಆದರೆ ಈ ಹೊಸ ತಳಿಯ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ. ಕೊರೊನಾ ವೈರಸ್ ಲಸಿಕೆ ರೂಪಾಂತರಿತ ವೈರಸ್ ವಿರುದ್ಧವೂ ಸಮಾನವಾಗಿ ಪರಿಣಾಮಕಾರಿ. ಹೀಗಾಗಿ ಯಾರೂ ಭಯಭೀತರಾಗಬೇಡಿ ಅಂತಾ ಮನವಿ ಮಾಡಿದ್ದಾರೆ.