ಕಳೆದ ನಾಲ್ಕು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ನವನೀತ್ ಕೊರೊನಾ ಸಂಕಷ್ಟದಿಂದಾಗಿ ತಮ್ಮ ಕೆಲಸವನ್ನ ಕಳೆದುಕೊಂಡಿದ್ದರು. ಇನ್ನು ತಮ್ಮ ಜೀವನದ ಕತೆ ಮುಗೀತು ಅಂತಾ ಅಂದುಕೊಳ್ಳುವಷ್ಟರಲ್ಲಿ ನವನೀತ್ ಇದೀಗ ಕೋಟ್ಯಾಧಿಪತಿಯಾಗಿದ್ದಾರೆ.
ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲೆಯನೇರ್ ಲಕ್ಕಿ ಡ್ರಾದಲ್ಲಿ ನವನೀತ್ ಮಿಲಿಯನ್ ಡಾಲರ್ ಗಳಿಸಿದ ಲಕ್ಕಿ ವಿನ್ನರ್ ಅಂತಾ ಗಲ್ಫ್ ನ್ಯೂಸ್ ವರದಿ ಮಾಡಿದೆ.
ಕೊರೊನಾದಿಂದಾಗಿ ಅಬುದಾಬಿ ಮೂಲದ ಕಂಪನಿಯಲ್ಲಿ ಕೆಲಸ ಕಳೆದುಕೊಂಡಿದ್ದ ನವನೀತ್ ನೋಟಿಸ್ ಅವಧಿಯನ್ನ ಪೂರೈಸುತ್ತಿದ್ದರು. ಪತ್ನಿ ಹಾಗೂ ಮಗುವಿನೊಂದಿಗೆ ದುಬೈನಲ್ಲೇ ನೆಲೆಸಿರುವ ನವನೀತ್ ಕೆಲಸ ಇದೇ ತಿಂಗಳ 28ರಂದು ಕೊನೆಗಾಣಲಿತ್ತು.
ಮೂಲತಃ ಕೇರಳದ ಕಾಸರಗೋಡಿನವರಾದ ನವನೀತ್ ನವೆಂಬರ್ 22ರಂದು ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಬಹುಮಾನದ ಮೊತ್ತವನ್ನ ನವನೀತ್ ನಾಲ್ಕು ಮಂದಿಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಆದರೂ ಸಹ ನವನೀತ್ 1,47,70,002.14 ರೂಪಾಯಿ ಹಣವನ್ನ ಮನೆಗೆ ಕೊಂಡೊಯ್ಯಲಿದ್ದಾರೆ.