ಬೆಂಗಳೂರು: ಬ್ರಿಟನ್ ನಲ್ಲಿ ಕೊರೊನಾ ರೂಪಾಂತರ ವೈರಸ್ ವೇಗವಾಗಿ ಹರಡುತ್ತಿದ್ದು, ಸಿನಿಮಾ ಶೂಟಿಂಗ್ ಗಾಗಿ ಲಂಡನ್ ನಲ್ಲಿ ಬೀಡು ಬಿಟ್ಟಿದ್ದ ಸ್ಯಾಂಡಲ್ ವುಡ್ ನಟಿ ಈಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಕೊರೊನಾ ಭೀತಿ ನಡುವೆ ವಿದೇಶದಿಂದ ಬಂದಿದ್ದರೂ ಹರ್ಷಿಕಾ ಮಾತ್ರ ಕ್ವಾರಂಟೈನ್ ಆಗಿಲ್ಲ.
ನಟಿ ಹರ್ಷಿಕಾ ಪೂಣಚ್ಚ ಭೋಜ್ ಪುರಿ ಸಿನಿಮಾ ಶೂಟಿಂಗ್ ಗಾಗಿ ಹಲವು ದಿನಗಳಿಂದ ಲಂಡನ್ ನಲ್ಲಿದ್ದರು. ಕೆಲದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿರುವ ಅವರು ಡಿಸೆಂಬರ್ 18ರಂದು ಫೋಟೋ ಶೂಟ್ ನಲ್ಲೂ ಭಾಗವಹಿಸಿದ್ದಾರೆ.
ಬ್ರಿಟನ್ ನಲ್ಲಿ ಈಗಾಗಲೇ ಕೊರೊನಾ ಹೊಸ ರೂಪಾಂತರ ವೈರಸ್ ವೇಗವಾಗಿ ಹರಡುತ್ತಿದ್ದು, ಬ್ರಿಟನ್ ನಿಂದ ವಾಪಸ್ಸಾದ ಹಲವರಲ್ಲಿ ಈ ಸೋಂಕು ಪತ್ತೆಯಾಗುತ್ತಿದೆ. ಹೀಗಿದ್ದರೂ ಕೂಡ ನಟಿ ಹರ್ಷಿಕಾ ಪೂಣಚ್ಚ ಕ್ವಾರಂಟೈನ್ ಗೂ ಒಳಗಾಗದೇ ಶೂಟಿಂಗ್ ಗಳಲ್ಲಿ ಭಾಗವಹಿಸುತ್ತಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಷಿಕಾ, ನನಗೆ ಕೊರೊನಾದ ಯಾವುದೇ ಗುಣಲಕ್ಷಣಗಳೂ ಕಂಡುಬಂದಿಲ್ಲ. ಲಂಡನ್ ನಿಂದ ಎರಡು ವಾರದ ಹಿಂದೆಯೇ ವಾಪಸ್ ಆಗಿದ್ದು, ಆರಾಮವಾಗಿದ್ದೇನೆ ಎಂದು ಹೇಳಿದ್ದಾರೆ.