alex Certify ಎಲೆಕ್ಟ್ರಿಕ್​ ಕಾರು ತಯಾರಿಕೆಗೆ ಮುಂದಾದ ಆಪಲ್​ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್​ ಕಾರು ತಯಾರಿಕೆಗೆ ಮುಂದಾದ ಆಪಲ್​ ಸಂಸ್ಥೆ

ಟೆಕ್​ ದೈತ್ಯ ಆಪಲ್​ ಸಂಸ್ಥೆ ಆಟೋಮೊಬೈಲ್​ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿದೆ. ಐಫೋನ್​ ತಯಾರಕ ಸಂಸ್ಥೆ ಇದೀಗ ಸ್ವಯಂ ಚಾಲಿತ ಕಾರನ್ನ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸುತ್ತಿದೆ.

2024ರ ವೇಳೆಗೆ ಈ ಪ್ರಸ್ತಾವಿತ ಕಾರನ್ನ ಲೋಕಾರ್ಪಣೆ ಮಾಡುವ ಗುರಿಯನ್ನ ಆಪಲ್​ ಸಂಸ್ಥೆ ಹೊಂದಿದೆ. ಇದು ಮಾತ್ರವಲ್ಲದೇ ತನ್ನದೇ ಆದ ಬ್ಯಾಟರಿ ತಂತ್ರಜ್ಞಾನ ನಿರ್ಮಾಣಕ್ಕೂ ಆಪಲ್​ ಸಂಸ್ಥೆ ಕೈ ಹಾಕಿದೆ.

ಆಪಲ್​ ಸಂಸ್ಥೆ 2014ರಿಂದಲೇ ಈ ಪರಿಕಲ್ಪನೆಯ ಬಗ್ಗೆ ಕೆಲಸ ಮಾಡಲು ಆರಂಭಿಸಿತ್ತು. ಅಲ್ಲದೇ ಈ ಕಂಪನಿ ತನ್ನ ಆಟೋ ಉದ್ಯಮಕ್ಕೆ ಪ್ರಾಜೆಕ್ಟ್​ ಟೈಟಾನ್​ ಎಂಬ ಹೆಸರನ್ನೂ ನೀಡಿತ್ತು. ಆದರೆ 2016ರ ಸುಮಾರಿಗೆ ತನ್ನ ಈ ಯೋಜನೆಯನ್ನ ಕೈಬಿಟ್ಟಿತ್ತು. ಆದರೆ ಇದೀಗ ಮತ್ತೊಮ್ಮೆ ಹೊಸ ಪ್ಲಾನ್​ನೊಂದಿಗೆ ಆಟೋಮೊಬೈಲ್​ ಕ್ಷೇತ್ರಕ್ಕೆ ಪದಾರ್ಪಣೆ ಮಾಡಲು ತಯಾರಿ ನಡೆಸಿದೆ.

ಎಲೆಕ್ಟ್ರಿಕ್​ ಕಾರಿನ ತಯಾರಿಕೆಗೆ ಮುಂದಾಗಿರುವ ಆಪಲ್​ಗೆ ಅಗ್ಗದ ಬೆಲೆಯಲ್ಲಿ ಬ್ಯಾಟರಿಯನ್ನ ತಯಾರಿ ಮಾಡುವ ಅವಶ್ಯಕತೆ ಇದೆ. ಆದರೆ ಬ್ಯಾಟರಿಯನ್ನ ತಯಾರಿಸೋದು ಸುಲಭದ ಕೆಲಸವಲ್ಲ.

ಏಕೆಂದರೆ ಸಂಪೂರ್ಣ ಕಾರಿನ ಕ್ಷಮತೆ ಬ್ಯಾಟರಿಯ ಗುಣಮಟ್ಟದ ಮೇಲೆಯೇ ಅವಲಂಬಿತವಾಗಿರುತ್ತೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಎಲೆಕ್ಟ್ರಾನಿಕ್​ ಕಾರು ತಯಾರಕ ಟೆಸ್ಲಾ ಕಂಪನಿಯನ್ನ ಹಿಂದಿಕ್ಕುವ ಸವಾಲು ಆಪಲ್​ ಮುಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...