ಪಬ್ ನಲ್ಲಿ ಸಿಕ್ಕಿ ಬಿದ್ದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ…! 22-12-2020 1:21PM IST / No Comments / Posted In: Latest News, Sports ಸೋಮವಾರ ತಡರಾತ್ರಿ ಪಬ್ವೊಂದರ ಮೇಲೆ ಮುಂಬೈ ಪೊಲೀಸರು ದಾಳಿ ನಡೆಸಿದ್ದು ಅವರು ಬಂಧಿಸಿದ ಗಣ್ಯ ವ್ಯಕ್ತಿಗಳ ಪೈಕಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೂಡ ಒಬ್ಬರಾಗಿದ್ದಾರೆ. ಮುಂಬೈನ ಡ್ರ್ಯಾಗನ್ ಫ್ಲೈ ಪಬ್ ಮೇಲೆ ದಾಳಿ ನಡೆಸಿದ ಪೊಲೀಸರು ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದ ಕಾರಣಕ್ಕೆ ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ ಹಲವರ ವಿರುದ್ಧ ಐಪಿಸಿ ಸೆಕ್ಷನ್ 188, 269, 34 ಮತ್ತು ಎನ್ಎಂಡಿಎ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರೈನಾ ಜೊತೆಗೆ ಗಾಯಕ ಗುರು ರಾಂಧವ ಸೇರಿದಂತೆ ಹಲವರು ಇದೀಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಬ್ರಿಟನ್ನಲ್ಲಿ ಕೊರೊನಾ ರೂಪಾಂತರಗೊಂಡಿರುವ ಬೆನ್ನಲ್ಲೇ ಪುರಸಭೆ ಪ್ರದೇಶಗಳಲ್ಲಿ ಮಹಾರಾಷ್ಟ್ರ ಸರ್ಕಾರ ನೈಟ್ ಕರ್ಫ್ಯೂ ವಿಧಿಸಿತ್ತು. Police book 34 people including cricketer Suresh Raina & some other celebrities under Section 188, 269, 34 of IPC & provisions of NMDA after a raid at Dragonfly pub for keeping establishment open beyond permissible time limit & not following COVID norms: Mumbai Police — ANI (@ANI) December 22, 2020