alex Certify ಬ್ರಿಟನ್​​ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್​…! ಇದರ ಪರಿಣಾಮ ಹೇಗಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟನ್​​ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್​…! ಇದರ ಪರಿಣಾಮ ಹೇಗಿದೆ ಗೊತ್ತಾ….?

ಬ್ರಿಟನ್​ನಲ್ಲಿ ಕೊರೊನಾ ಅಲೆ ಹೊಸ ರೂಪವನ್ನ ಪಡೆದುಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಬ್ರಿಟನ್​ನಿಂದ ಡಿಸೆಂಬರ್​ 31ರವರೆಗೆ ಎಲ್ಲಾ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ಕೊರೊನಾ ರೂಪಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವದ ಅನೇಕ ರಾಷ್ಟ್ರಗಳು ಬ್ರಿಟನ್​​ಗೆ ವಿಮಾನಯಾನವನ್ನ ಸ್ಥಗಿತಗೊಳಿಸಿವೆ.

ಕಳೆದ ವಾರದಲ್ಲಿ ಕೋವಿಡ್​ ವೈರಸ್​ ರೂಪಾಂತರಗೊಂಡಿದ್ದು ದಕ್ಷಿಣ ಹಾಗೂ ಪೂರ್ವ ಇಂಗ್ಲೆಂಡ್​ನಲ್ಲಿ ಸೋಂಕು ಅತ್ಯಂತ ವೇಗವಾಗಿ ಏರಿಕೆ ಕಾಣಲು ಸಹಾಯಕವಾಗಿವೆ. ಹೊಸ ರೂಪಾಂತರ ಪಡೆದ ಸೋಂಕಿನ 1108 ಪ್ರಕರಣಗಳನ್ನ ಈಗಾಗಲೇ ಗುರುತಿಸಲಾಗಿದೆ. ಈ ಹೊಸ ಸೋಂಕಿನ ಬಗ್ಗೆ ಸಂಶೋಧನೆಗಳು ತೀವ್ರಗೊಂಡಿವೆ.

ಕೊರೊನಾ ವೈರಸ್​ ತನ್ನಲ್ಲಿ ಅನೇಕ ಬದಲಾವಣೆಯನ್ನ ಮಾಡಿಕೊಂಡು ಹೊಸ ರೂಪವನ್ನ ಪಡೆದುಕೊಂಡಿದೆ. ಕೊರೊನಾ ವೈರಸ್​ನ ಪ್ರೋಟೀನ್​ ಹಾಗೂ ಆರ್​ಎನ್​ಎಗಳಲ್ಲಿ ಕೆಲ ಬದಲಾವಣೆ ಉಂಟಾಗಿದ್ದು ಇದು ಮಾನವ ಜೀವಕೋಶದ ಎಸಿಇ 2 ಗ್ರಾಹಕದೊಂದಿಗೆ ಬಂಧಿಸುತ್ತದೆ. ಈ ಕಾರಣದಿಂದಾಗಿ ಈ ರೂಪಾಂತರಗೊಂಡ 70 ಪ್ರತಿಶತ ಹೆಚ್ಚಿನ ಪ್ರಮಾಣದಲ್ಲಿ ರೋಗವನ್ನ ಹರಡಬಲ್ಲುದು ಎಂದು ಅಂದಾಜಿಸಲಾಗಿದೆ.

ಆದರೆ ಈ ರೂಪಾಂತರಗೊಂಡ ವೈರಸ್​ ತೀವ್ರವಾದ ಕಾಯಿಲೆ ಅಥವಾ ಮರಣಕ್ಕೆ ಕಾರಣವಾಗುತ್ತಾ ಎಂಬುದರ ಬಗ್ಗೆ ಇನ್ನೂ ಯಾವುದೇ ಪುರಾವೆಗಳು ದೊರಕಿಲ್ಲ. ಈ ಹೊಸ ವೈರಸ್​ನ ಪರಿಣಾಮದ ಬಗ್ಗೆ ಸಂಶೋಧನೆಗಳು ಮುಂದುವರಿದಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ರೂಪಾಂತರಗೊಂಡ ವೈರಸ್​ ಬಗ್ಗೆ ಆತಂಕ ಬೇಡ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...