ಬಿಹಾರದ ನಳಂದಾ ಜಿಲ್ಲೆಯ ರಾಜಗೃಹದಲ್ಲಿ ಗಾಜಿನ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ಮೃಗಾಲಯ ಹಾಗೂ ಸಫಾರಿ ಪಾರ್ಕ್ ಒಂದನ್ನು ಬಿಹಾರದ ಅರಣ್ಯ ಇಲಾಖೆ ನಿರ್ಮಿಸಲಿದೆ.
ಚೀನಾದ ಹಾಂಗ್ಝೌನಲ್ಲಿರುವಂತೆ ಗಾಜಿನ ಸೇತುವೆಯನ್ನು ಬಿಹಾರದಲ್ಲಿ ನಿರ್ಮಿಸಲಾಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಖುದ್ದು ಸೇತುವೆಯ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದ್ದಾರೆ. ಮಾರ್ಚ್ 2021ರ ವೇಳೆಗೆ ಸೇತುವೆಯನ್ನು ಪ್ರವಾಸಿಗರಿಗೆ ತೆರವುಗೊಳಿಸಲಾಗುವುದು.
200 ಅಡಿ ಎತ್ತರದಲ್ಲಿರುವ ಈ ಸೇತುವೆ, 85 ಅಡಿ ಉದ್ದವಿದ್ದು, ಆರು ಅಡಿ ಅಗಲವಿದೆ. ಸೇತುವೆ ಮೇಲೆ ಒಮ್ಮೆಲೆ 40 ಮಂದಿ ಓಡಾಡಬಹುದಾಗಿದೆ. ಬೌದ್ಧ ಧರ್ಮದ ಪ್ರಖರವಾದ ಇತಿಹಾಸವಿರುವ ರಾಜಗೃಹ ಪ್ರದೇಶವು ಅಂತಾರಾಷ್ಟ್ರೀಯ ಪ್ರವಾಸೀ ತಾಣವಾಗಿದೆ. ರಿಷಿಕೇಶದ ಲಕ್ಷ್ಮಣ ಜೂಲಾದಲ್ಲಿ ದೇಶದ ಮೊದಲ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.