ಚೆನ್ನೈ: ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ 82 ದಿನಗಳ ನಿರಂತರ ಚಿಕಿತ್ಸೆಯ ಬಳಿಕ ಹೆದ್ದಾರಿ ಇಲಾಖೆಯ 47 ವರ್ಷದ ಉದ್ಯೋಗಿ ಕೋವಿಡ್ ನಿಂದ ಗುಣವಾಗಿದ್ದಾರೆ. ಸೋಮವಾರ ಆಸ್ಪತ್ರೆಯಿಂದ ಅವರನ್ನು ಬೀಳ್ಕೊಡಲಾಯಿತು.
ಸೆಪ್ಟೆಂಬರ್ ನಲ್ಲಿ ಅವರು ಆಸ್ಪತ್ರೆಗೆ ಸೇರಿದಾಗ ಶೇ.80 ರಷ್ಟು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ಅವರನ್ನು ನಿರಂತರ ನಿಗಾದಲ್ಲಿಡಲು ಶಿಫ್ಟ್ ಮೇಲೆ 8 ವೈದ್ಯರನ್ನು ನೇಮಕ ಮಾಡಲಾಗಿತ್ತು. ನಂತರ ಹಂತ ಹಂತವಾಗಿ ಅವರು ಚೇತರಿಸಿಕೊಂಡರು ಎಂದು ಚೆನ್ನೈ ರಾಜೀವ್ ಗಾಂಧಿ ಆಸ್ಪತ್ರೆಯ ಡೀನ್ ಡಾ.ಇ. ತೇರಾ ನಿರಂಜನ್ ಹೇಳಿದ್ದಾರೆ.
ಅವರು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಇಲಾಖೆಯಲ್ಲಿ ಅಧಿಕಾರಿಗಳ ಬಡ್ತಿಯೂ ಆಯಿತು. ಒಂದು ದಿನದ ಮಟ್ಟಿಗೆ ತಾನು ಹೋಗಿ ಬರುವುದಾಗಿ ಹೆದ್ದಾರಿ ಅಧಿಕಾರಿ ಕೇಳಿದ್ದರು. ಆದರೆ, ಬಡ್ತಿಗಿಂತ ಜೀವ ಉಳಿಸುವುದು ಮುಖ್ಯ ಎಂದು ನಾವು ಅವರಿಗೆ ಆಸ್ಪತ್ರೆಯಿಂದ ತೆರಳಲು ಅವಕಾಶ ನೀಡಲಿಲ್ಲ ಎಂದು ಡೀನ್ ಹೇಳಿದ್ದಾರೆ.