ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬಿಡೆನ್ ಅವರು ಕೊರೊನಾ ಲಸಿಕೆಯನ್ನ ನೇರ ಪ್ರಸಾರದಲ್ಲಿಯೇ ಸ್ವೀಕರಿಸಿದ್ದಾರೆ. ಅಮೆರಿಕದ ಜನತೆಗೆ ಕೊರೊನಾ ಲಸಿಕೆ ಸುರಕ್ಷಿತವಾಗಿದೆ ಎಂದು ಮನವರಿಕೆ ಮಾಡಿಕೊಡುವ ಸಲುವಾಗಿ ಬಿಡೆನ್ ಸೋಮವಾರ ಟಿವಿ ನೇರ ಪ್ರಸಾರದಲ್ಲಿ ಲಸಿಕೆ ಪಡೆದಿದ್ದಾರೆ.
ಮೊಡರ್ನಾ ತಯಾರಿಸಿರುವ ಲಸಿಕೆ ಅಮೆರಿಕಕ್ಕೆ ಬಂದು ತಲುಪಿದೆ. ಕೊರೊನಾ ವಿರುದ್ಧ ಈ ಲಸಿಕೆ ಸುರಕ್ಷಿತ ಎಂದು ತೋರಿಸಲು ಜೋ ಬಿಡೆನ್ ಈ ನಿರ್ಧಾರ ಕೈಗೊಂಡಿದ್ದಾರೆ. ಅಮೆರಿಕದಲ್ಲಿ ಈವರೆಗೆ ಕೊರೊನಾದಿಂದ 3.17 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಅಮೆರಿಕದ ಜನರಿಗೆ ಲಸಿಕೆ ಸುರಕ್ಷತೆ ಖಾತರಿ ಮಾಡುವ ಸಲುವಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬಿಡೆನ್ ಹೇಳಿದ್ದಾರೆ. ಕೊರೊನಾ ಲಸಿಕೆ ಸ್ವೀಕಾರದ ಬಳಿಕ ಬಿಡೆನ್ ಹಾಗೂ ಅವರ ಪತ್ನಿ ಜಿಲ್ ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ದಂಪತಿ ಮುಂದಿನ ವಾರ ಕೊರೊನಾ ಲಸಿಕೆ ಪಡೆಯುವ ಸಾಧ್ಯತೆ ಇದೆ.