alex Certify ಕೆಜಿಎಫ್​ ಚಾಪ್ಟರ್ ​2 ಟೀಸರ್​ ರಿಲೀಸ್​ಗೆ ಕೊನೆಗೂ ಮುಹೂರ್ತ ಫಿಕ್ಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಜಿಎಫ್​ ಚಾಪ್ಟರ್ ​2 ಟೀಸರ್​ ರಿಲೀಸ್​ಗೆ ಕೊನೆಗೂ ಮುಹೂರ್ತ ಫಿಕ್ಸ್…!

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್​ 2 ತನ್ನ ಮೇಕಿಂಗ್​ ಮೂಲಕವೇ ಸಾಕಷ್ಟು ಸುದ್ದಿ ಮಾಡಿದೆ. ಚಿತ್ರತಂಡ ಮಾಡಿದ ಪ್ರಮಾಣದಂತೆಯೇ ಕೆಜಿಎಫ್​ 2ನ ಹೊಸ ಪೋಸ್ಟರ್​ವೊಂದು ರಿಲೀಸ್​ ಮಾಡಿದೆ. ನಿರ್ದೇಶಕ ಪ್ರಶಾಂತ್​ ನೀಲ್​ ಟ್ವೀಟ್​ ಮಾಡಿರುವ ಈ ಪೋಸ್ಟರ್​​ನಲ್ಲಿ ರಾಕಿಂಗ್​ ಸ್ಟಾರ್​​ ಯಶ್​ ಗಂಭೀರವಾಗಿ ಕುಳಿತಿದ್ದು ಅವರ ಲುಕ್​ ಸಖತ್​ ಕಿಕ್​ ಕೊಡುವಂತಿದೆ.

ಕಳೆದ 2 ವರ್ಷಗಳಿಂದ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಕೊನೆಗೂ ಶುಭ ಸುದ್ದಿಯೊಂದನ್ನ ನೀಡಿದೆ. ಕೆಜಿಎಫ್​2ನ ಟೀಸರ್​ ಬಿಡುಗಡೆಯ ದಿನಾಂಕವನ್ನ ನಿರ್ದೇಶಕ ಪ್ರಶಾಂತ್​ ನೀಲ್​ ಟ್ವಿಟರ್​ನಲ್ಲಿ ಬಹಿರಂಗಗೊಳಿಸಿದ್ದಾರೆ.

ಕೆಜಿಎಫ್​ 2 ಇದೊಂದು ಸಾಮ್ರಾಜ್ಯದ ನೋಟ. ಇದನ್ನ ನಿರ್ಮಾಣ ಮಾಡೋಕೆ ನಾವು ವರ್ಷಕ್ಕೂ ಹೆಚ್ಚು ಸಮಯವನ್ನ ತೆಗೆದುಕೊಂಡಿದ್ದೇವೆ. ಆದರೆ ನಾವು ಇನ್ನಷ್ಟು ಸದೃಢರಾಗಿ ನಿಮ್ಮ ಮುಂದೆ ಬರುತ್ತಿದ್ದೇವೆ. ಜನವರಿ 8ನೇ ತಾರೀಖು ಬೆಳಗ್ಗೆ 10 ಗಂಟೆ 18 ನಿಮಿಷಕ್ಕೆ ಸರಿಯಾಗಿ ಹೊಂಬಾಳೆ ಫಿಲಂಸ್​ ಯುಟ್ಯೂಬ್​ ಚಾನೆಲ್​ನಲ್ಲಿ ಕೆಜಿಎಫ್​ 2 ಸಿನಿಮಾ ಟೀಸರ್​ ಬಿಡುಗಡೆಯಾಗಲಿದೆ ಅಂತಾ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಜನವರಿ 8 ರಾಕಿಂಗ್​ ಸ್ಟಾರ್​ ಯಶ ಜನ್ಮದಿನ. ಇದೇ ದಿನದಂದು ಸಿನಿಮಾ ಟೀಸರ್​ ಬಿಡುಗಡೆಯಾಗುತ್ತೆ ಅಂತಾ ಅನೇಕರು ಊಹಿಸಿದ್ದರು, ಇದೀಗ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಪ್ರಶಾಂತ್​ ನೀಲ್​ ಟೀಸರ್​ ಬಿಡುಗಡೆ ಮುಹೂರ್ತವನ್ನ ರಿವೀಲ್​ ಮಾಡಿದ್ದು ಅಭಿಮಾನಿಗಳು ಫುಲ್​ ಖುಶ್​ ಆಗಿದ್ದಾರೆ.

— Prashanth Neel (@prashanth_neel) December 21, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...