ಕೊರೊನಾ ಕಾರಣದಿಂದಾಗಿ ಮಕ್ಕಳಿಗೆ ಶಾಲೆಗಳನ್ನ ಬಂದ್ ಮಾಡಲಾಗಿದ್ದು ಆನ್ಲೈನ್ ಶಿಕ್ಷಣದ ಮೂಲಕವೇ ಪಾಠ ಮಾಡಲಾಗುತ್ತಿದೆ. ಆದರೆ ಮಕ್ಕಳನ್ನ ನಾಲ್ಕು ಗೋಡೆಯೊಳಗೇ ಇಡೋದು ಬಹಳ ಕಷ್ಟದ ಕೆಲಸ.
ಶಾಲೆಗೆ ಹೋಗಿಲ್ಲ ಅಂದ್ರೂನು ಆಟದ ನೆಪದಲ್ಲಾದರೂ ಮಕ್ಕಳು ಮನೆಯಿಂದ ಹೊರಗೆ ಹೋಗೇ ಹೋಗ್ತಾರೆ. ಮಕ್ಕಳು ಕೊರೊನಾ ಸೋಂಕನ್ನ ತಾಕಿಸಿಕೊಳ್ಳೋದರ ಜೊತೆಗೆ ಮನೆಯಲ್ಲಿರುವ ವೃದ್ಧರಿಗೂ ಇದನ್ನ ಹಬ್ಬಿಸ್ತಾರೆ ಎಂಬ ಭಯ ಅನೇಕ ಪೋಷಕರಲ್ಲಿದೆ. ಆದರೆ ಈ ಎಲ್ಲಾ ಭಯಕ್ಕೆ ಹೊಸ ಅಧ್ಯಯನವೊಂದು ಸಮಾಧಾನಕಾರಿ ಉತ್ತರವನ್ನ ಹುಡುಕಿದೆ.
ಸಾರ್ವಜನಿಕ ಆರೋಗ್ಯ ಭಾರತೀಯ ವಿಶ್ವ ವಿದ್ಯಾಲಯ ಗಾಂಧಿನಗರ ನಡೆಸಿದ ಸಮೀಕ್ಷೆಯ ಪ್ರಕಾರ 0 ಯಿಂದ 18 ವರ್ಷದ ಒಳಗಿನವರಿಗೆ ಕೊರೊನಾ ಹರಡುವ ಸಾಧ್ಯತೆ ಬಹಳ ಕಡಿಮೆಯಂತೆ. ಈ ವಯಸ್ಸಿನವರು ಕೇವಲ 1.7 ಪ್ರತಿಶತದಷ್ಟು ಮಾತ್ರ ಇನ್ನೊಬ್ಬರಿಗೆ ವೈರಾಣುವನ್ನ ಹರಡಬಲ್ಲರು.